ಗಂಗೊಳ್ಳಿ: ಮಳೆಗಾಗಿ ವಿಶೇಷ ನಮಾಝ್, ಪ್ರಾರ್ಥನೆ

Update: 2019-05-25 04:46 GMT

ಗಂಗೊಳ್ಳಿ: ಇಲ್ಲಿನ ಕೇಂದ್ರ ಜುಮಾ ಮಸೀದಿಯಲ್ಲಿ ಮಳೆಗಾಗಿ ವಿಶೇಷ ನಮಾಝ್ ಮತ್ತು ಸಲಾತುಲ್ ಇಸ್ಥಿಸ್ಕಾವು ಶನಿವಾರ ಬೆಳಗ್ಗೆ 6.30ಕ್ಕೆ ನಡೆಯಿತು.

ಮದ್ರಸಾ ಝಿಯಾ ಉಲ್ ಉಲೂಮ್ ರಾಯ್ ಬರೆಲಿಯ ಮೌಲಾನಾ ಅಬ್ದುಸ್ ಸುಭಾನ್ ಸಾಹಬ್ ನದ್ವಿ ಮದನಿ ವಿಶೇಷ ನಮಾಝ್ ಸಲಾತುಲ್ ಇಸ್ಥಿಸ್ಕಾ ನೆರವೇರಿಸಿ, ಕುತ್ಬಾ ಪಾರಾಯಣಗೈದರು.

ಈ ಒಂದು ವಿಶೇಷ ಪ್ರಾರ್ಥನೆಯಲ್ಲಿ ಗಂಗೊಳ್ಳಿ ಸಹಿತ ಆಸುಪಾಸಿನ ಗ್ರಾಮದ ನೂರಾರು ಮಂದಿ  ಬಾಗವಹಿಸಿದ್ದರು. ಈ ಸಂಧರ್ಭದಲ್ಲಿ ಗಂಗೊಳ್ಳಿ ಜುಮಾ ಮಸೀದಿಯ ಇಮಾಮ್ ಮೌಲಾನಾ ಮುಝಮ್ಮಿಲ್ ಸಾಹಬ್ ನದ್ವಿ, ಶಾಹಿ ಜುಮಾ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ಮತೀನ್ ಸಾಹಬ್ ಸಿದ್ದಿಕಿ, ಮೋಹಿಯುದ್ದೀನ್ ಜುಮಾ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ವಹಾಬ್ ಸಾಹಬ್ ನದ್ವಿ ಸಹಿತ ಹಲವರು ಉಪಸ್ಥಿತರಿದ್ದರು..

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News