×
Ad

ಅಲ್ಪಸಂಖ್ಯಾತರ ವಿಶ್ವಾಸವನ್ನು ಗಳಿಸಬೇಕಿದೆ: ಪ್ರಧಾನಿ ಮೋದಿ

Update: 2019-05-25 21:06 IST

ಹೊಸದಿಲ್ಲಿ, ಮೇ 25: “ಬಡವರನ್ನು ಮೋಸಗೊಳಿಸಿದಂತೆಯೇ ದೇಶದಲ್ಲಿ ಅಲ್ಪಸಂಖ್ಯಾತರನ್ನೂ ವಂಚಿಸಲಾಗಿದೆ. ಅವರ ಶಿಕ್ಷಣ, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಾವು ಅವರ ವಿಶ್ವಾಸವನ್ನು ಗಳಿಸಬೇಕು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸಂಸದೀಯ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆಯಾದ ಬಳಿಕ ಮಾತನಾಡಿದ ಅವರು, “ಸಬ್ಕಾ ಸಾಥ್ ಸಬ್ಕಾ ವಿಕಾಸ್ ಗಾಗಿ ನಾವು ಕೆಲಸ ಮಾಡಿದೆವು. ಇನ್ನು ಸಬ್ಕಾ ವಿಶ್ವಾಸ್ ಎನ್ನುವುದು ನಮ್ಮ ಮಂತ್ರವಾಗಿದೆ. ಬಡವರು ವಂಚನೆಗೊಳಗಾಗುವುದನ್ನು ನಾವು ಕೊನೆಗೊಳಿಸಬೇಕಿದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News