ನೂತನವಾಗಿ ಆಯ್ಕೆಯಾದ ಶೇ.50 ಸಂಸದರು ಕ್ರಿಮಿನಲ್ ದಾಖಲೆಯವರು !

Update: 2019-05-25 17:33 GMT

ಹೊಸದಿಲ್ಲಿ, ಮೇ.25: 17ನೇ ಲೋಕಸಭೆಗೆ ಚುನಾಯಿತರಾಗಿರುವ ಸಂಸದರ ಪೈಕಿ ಅರ್ಧದಷ್ಟು ಸಂಸದರು ಕ್ರಿಮಿನಲ್ ದಾಖಲೆ ಹೊಂದಿರುವವರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 2019ರ ಲೋಕಸಭೆಯಲ್ಲಿ ವಿಶ್ಲೇಷಿಸಲಾಗಿರುವ 539 ಸಂಸದರಲ್ಲಿ 233 ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳ ಘೋಷಣೆ ಮಾಡಿದ್ದಾರೆ. ಇದು 2009ರಲ್ಲಿ ಕ್ರಿಮಿನಲ್ ಹಿನ್ನೆಲೆ ಘೋಷಣೆ ಮಾಡಿದ ಸಂಸದರಿಗಿಂತ ಶೇ.44 ಹೆಚ್ಚಾಗಿದೆ. ಇದರರ್ಥ, 2019ರ ಲೋಕಸಭಾ ಚುನಾವಣೆಯಲ್ಲಿ ಕ್ರಿಮಿನಲ್ ದಾಖಲೆ ಹೊಂದಿರುವ ಬಗ್ಗೆ ಘೋಷಿಸಿದ ಅಭ್ಯರ್ಥಿ ಜಯ ಗಳಿಸುವ ಸಾಧ್ಯತೆ ಶೇ.15.5 ಆಗಿದ್ದರೆ ಶುದ್ಧಹಸ್ತದ ಅಭ್ಯರ್ಥಿ ಜಯ ಗಳಿಸುವ ಸಾಧ್ಯತೆ ಶೇ.4.7 ಆಗಿದೆ.

2014ರಲ್ಲಿ 185 (ಶೇ.34) ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಘೋಷಿಸಿದ್ದರೆ 2009ರಲ್ಲಿ ಈ ಸಂಖ್ಯೆ 162 (ಶೇ.30) ಆಗಿತ್ತು. ಆದರೆ 2019ರಲ್ಲಿ ಬಹುತೇಕ ಶೇ. 50 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News