×
Ad

ಅಮೇಠಿ: ಸ್ಮೃತಿ ಇರಾನಿ ಬೆಂಬಲಿಗ ಗುಂಡಿಗೆ ಬಲಿ

Update: 2019-05-26 09:39 IST

ಅಮೇಠಿ, ಮೇ 26: ಲೋಕಸಭಾ ಚುನಾವಣೆಯಲ್ಲಿ ಅಮೇಠಿಯಿಂದ ವಿಜೇತರಾದ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರ ಬೆಂಬಲಿಗ ಎಂದು ಹೇಳಲಾದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರನ್ನು ಶನಿವಾರ ತಡ ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿದೆ.

ಸುರೇಂದ್ರ ಸಿಂಗ್  ಗುಂಡಿಗೆ ಬಲಿಯಾದವರು ಎಂದು ಹೆಚ್ಚುವರಿ ಎಸ್ಪಿ ದಯಾರಾಮ್ ಹೇಳಿದ್ದಾರೆ. ಶನಿವಾರ ರಾತ್ರಿ ಸುಮಾರು 11.30ಕ್ಕೆ ಇಬ್ಬರು ಅಪರಿಚಿತರು ಸುರೇಂದ್ರ ಸಿಂಗ್ ಮೇಲೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಗಾಯಗೊಂಡ ಅವರನ್ನು ಲಕ್ನೋಗೆ ಕರೆದುಕೊಂಡ ಹೋಗಲಾಯಿತು ಆದರೂ ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. 

ಗಾಂಧೀ ಕುಟುಂಬದ ಭದ್ರ ಕೋಟೆ ಎಂದೇ ಪರಿಗಣಿಸಲಾದ ಅಮೇಠಿಯಲ್ಲಿ ಮೂರು ಬಾರಿಯ ಸಂಸದ ರಾಹುಲ್ ಗಾಂಧಿ ಅವರನ್ನು ಬಿಜೆಪಿ ನಾಯಕಿ ಸ್ಮೃತಿ ಇರಾನಿ ಈ ಬಾರಿ 55 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News