ಮಗುವಿಗೆ 'ನರೇಂದ್ರ ಮೋದಿ' ಎಂದು ಹೆಸರಿಟ್ಟ ಮುಸ್ಲಿಂ ಮಹಿಳೆ!

Update: 2019-05-26 08:51 GMT

ಹೊಸದಿಲ್ಲಿ, ಮೇ 26: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಮೇ 23ರಂದು ಮಗುವಿಗೆ ಮುಸ್ಲಿಂ ಮಹಿಳೆಯೊಬ್ಬರು ‘ನರೇಂದ್ರ ದಾಮೋದರ್ ದಾಸ್ ಮೋದಿ’ ಎಂದು ಹೆಸರಿಟ್ಟಿದ್ದಾರೆ.

ಉತ್ತರ ಪ್ರದೇಶದ ಗೊಂಡಾದ ಮಹ್ರೌರ್ ಗ್ರಾಮದ ಮಹಿಳೆ ಮೈನಾಝ್ ಬೇಗಂ ತನ್ನ ಮಗುವಿಗೆ ‘ನರೇಂದ್ರ ಮೋದಿ’ ಎಂದು ಹೆಸರಿಟ್ಟಿದ್ದಾರೆ.

ಆದರೆ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಆಕೆಯ ಮನವೊಲಿಸಲು ಪ್ರಯತ್ನಿಸಿದರು. ಆದರೆ ಆಕೆ ಒಪ್ಪದ ಕಾರಣ ಕುಟುಂಬವೂ ಒಪ್ಪಿಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News