ದ.ಕ. ಜಿಲ್ಲೆ 42 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ: ಪ್ರಯೋಜನ ಪಡೆಯಲು ಎಐಎಂಡಿಸಿ ಮನವಿ

Update: 2019-05-27 10:22 GMT

ಮಂಗಳೂರು, ಮೇ 27: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯ 42 ಸರಕಾರಿ ಶಾಲೆಗಳಲ್ಲಿ ಆಂಗ್ಲ್ಲಮಾಧ್ಯಮ ಆರಂಭಗೊಳ್ಳಲಿದೆ. ಎಲ್.ಕೆ.ಜಿ ಮತ್ತು ಯು.ಕೆ.ಜಿ ಹಾಗೂ ಒಂದನೇ ತರಗತಿ ಆರಂಭಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಕೌನ್ಸಿಲ್ (ಎಐಎಂಡಿಸಿ) ಹಾಗೂ ಮಸ್ಜಿದ್ ಒನ್ ಮೂವ್‌ಮೆಂಟ್ ಒತ್ತಾಯಿಸಿದೆ.

ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಕಲಿಯಲು ಇದೊಂದು ಸುವರ್ಣಾವಕಾಶವಾಗಿದೆ. ಸರಕಾರಿ ಆಂಗ್ಲ ಮಾಧ್ಯಮ ಶಾಲೆ ಮಂಜೂರಾದ ಪ್ರದೇಶಗಳ ಮತ್ತು ಆಸುಪಾಸಿನ ಜಮಾಅತ್‌ಗಳಲ್ಲಿ ಈ ಅವಕಾಶದ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಹೆಚ್ಚಿನ ಮಕ್ಕಳು ದಾಖಲುಗೊಳ್ಳುವಂತೆ ಜಮಾಅತ್ ಕಮಿಟಿಗಳು ಹಾಗೂ ಸಂಘಸಂಸ್ಥೆಗಳು ಪ್ರಯತ್ನಿಸಬೇಕು. ಅಲ್ಲದೆ ಮಕ್ಕಳ ಹೆತ್ತವರು ಸ್ವಇಚ್ಛೆಯಿಂದ ತಮ್ಮ ಮಕ್ಕಳನ್ನು ಸರಕಾರಿ ಆಂಗ್ಲಮಾಧ್ಯಮ ಶಾಲೆಗೆ ದಾಖಲುಗೊಳಿಸಿ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವಂತೆ ಎಐಎಂಡಿಸಿ ಹಾಗೂ ಮಸ್ಜಿದ್ ಒನ್ ಮೂವ್‌ಮೆಂಟ್ ದ.ಕ. ಜಿಲ್ಲಾ ಅಧ್ಯಕ್ಷ ಅಹ್ಮದ್ ಮೊಹಿದೀನ್ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News