ಲೋಕಸಭಾ ಗೆಲುವು: ಪಕ್ಷದ ಕೆಳಹಂತದ ಕಾರ್ಯಕರ್ತರಿಗೆ ಶ್ರೇಯ ನೀಡಿದ ಮೋದಿ

Update: 2019-05-27 16:32 GMT

ವಾರಣಾಸಿ, ಮೇ.27: ಲೋಕಸಭಾ ಚುನಾವಣೆಯ ಗೆಲುವಿನ ನಂತರ ಮೊದಲ ಬಾರಿ ತನ್ನ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ತನ್ನನ್ನು ಬೃಹತ್ ಅಂತರದಿಂದ ಗೆಲ್ಲಿಸಿದ ಮತದಾರರಿಗೆ ಧನ್ಯವಾದ ಅರ್ಪಿಸಿದರು. ಇದೇ ವೇಳೆ ಈ ಗೆಲುವಿನ ಶ್ರೇಯವನ್ನು ಅವರು ಪಕ್ಷದ ಕೆಳಹಂತದ ಕಾರ್ಯಕರ್ತರಿಗೆ ನೀಡಿದರು.

ಈ ಬಾರಿ ಚುನಾವಣೆಯಲ್ಲಿ ಅಂಕ ಗಣಿತಕ್ಕಿಂತ (ಅಂಕಿಅಂಶಗಳು) ರಸಾಯನಶಾಸ್ತ್ರವೇ (ಜನರ ಒಡನಾಟ) ಮೇಲುಗೈ ಸಾಧಿಸಿತು ಎಂದು ತಿಳಿಸಿದ ಮೋದಿ, ಚುನಾವಣಾ ಲೆಕ್ಕಾಚಾರಕ್ಕಿಂತಲೂ ಮಿಗಿಲಾದ ಬಾಂಧವ್ಯ ಒಂದಿದೆ ಎಂಬುದನ್ನು ರಾಜಕೀಯ ವಿಶ್ಲೇಷಕರು ಒಪ್ಪಿಕೊಳ್ಳಬೇಕು ಎಂದು ಹೇಳಿದರು. ವಾರಣಾಸಿಯ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ, ನಾನು ದೇಶಕ್ಕೆ ಪ್ರಧಾನಿಯಾಗಿರಬಹುದು ಆದರೆ ನಿಮಗೆ ನಾನು ಸಂಸದ, ನಿಮ್ಮ ಸೇವಕ ಎಂದು ತಿಳಿಸಿದರು. ಕೆಲಸ ಮತ್ತು ಕಾರ್ಯಕರ್ತರು ಅದ್ಭುತಗಳನ್ನು ಸೃಷ್ಟಿಸುತ್ತಾರೆ. ತನ್ನ ಸರಕಾರದ ನೀತಿಗಳು ಮತ್ತು ಜನಪರ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿದ ಪಕ್ಷದ ಕೆಳಹಂತದ ಕಾರ್ಯಕರ್ತರಿಗೆ ಈ ಗೆಲುವಿನ ಶ್ರೇಯ ಸಲ್ಲುತ್ತದೆ ಎಂದು ಪ್ರಧಾನಿ ತಿಳಿಸಿದರು.

ಬಿಜೆಪಿ ಎಂದರೆ ರಾಜಕೀಯ ಅಸ್ಪಶ್ಯತೆಯ ಭಾವವಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ, ತ್ರಿಪುರ ಮತ್ತು ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಪ್ರಧಾನಿ ಖೇದ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News