ಪ.ಬಂಗಾಳದ 3 ಶಾಸಕರು, 60 ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆ

Update: 2019-05-28 11:58 GMT

ಹೊಸದಿಲ್ಲಿ, ಮೇ 28: ಪಶ್ಚಿಮ ಬಂಗಾಳದಲ್ಲಿ ಇಬ್ಬರು ತೃಣಮೂಲ ಕಾಂಗ್ರೆಸ್ ಮತ್ತು ಒಬ್ಬರು ಸಿಪಿಎಂ ಶಾಸಕರು ಹಾಗು 60 ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯ ಸಾಧ್ಯತೆಯಿದೆ.

ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ತೃಣಮೂಲ ಕಾಂಗ್ರೆಸ್ ಗೆ ಇದು ಮತ್ತೊಂದು ಆಘಾತ ನೀಡಿದೆ.

ಬಿಜ್ಪುರ್ ನ ಶಾಸಕ ಸುಭ್ರಾಂಶು ರಾಯ್, ನೊಪಾರದ ಸುನೀಲ್ ಸಿಂಗ್ ಮತ್ತು  ಬರ್ರಾಕ್ ಪೊರದ ಶಿಲ್ಭದ್ರ  ದತ್ತಾ ಮತ್ತು 30 ತೃಣಮೂಲ ಕಾಂಗ್ರೆಸ್ ಕೌನ್ಸಿಲರ್ ಗಳು ದಿಲ್ಲಿಗೆ ತಲುಪಿದ್ದಾರೆ.

“ಪಶ್ಚಿಮ ಬಂಗಾಳದಲ್ಲಿ 7 ಹಂತದ ಮತದಾನ ನಡೆದಂತೆ, 7 ಹಂತಗಳಲ್ಲಿ ಬಿಜೆಪಿ ಸೇರ್ಪಡೆ ನಡೆಯಲಿದೆ. ಇದು ಮೊದಲ ಹಂತ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News