×
Ad

ಸಲೂನ್‌ನಲ್ಲಿ ಸಿಬ್ಬಂದಿ ಮೇಲೆ ಹಲ್ಲೆ: ಟಿವಿ ನಟನ ಬಂಧನ

Update: 2019-05-28 22:04 IST

ಮುಂಬೈ, ಮೇ.28: ಮುಂಬೈಯ ಲೋಖಂಡ್‌ವಾಲಾದಲ್ಲಿರುವ ಸಲೂನ್‌ನ ಸಿಬ್ಬಂದಿಗೆ ಗೆಳೆಯನ ಜೊತೆ ಸೇರಿ ಚೂರಿಯಿಂದ ಹಲ್ಲೆ ನಡೆಸಿದ ಆರೋಪದಲ್ಲಿ ಟಿವಿ ನಟನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತನ್ನ ತಲೆಗೆ ಮಸಾಜ್ ಮಾಡುವ ವೇಳೆ ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ ಎಂದು ನಟನ ಗೆಳತಿ ಆರೋಪಿಸಿದ ಹಿನ್ನೆಲೆಯಲ್ಲಿ ಗೆಳೆಯನೊಂದಿಗೆ ಸಲೂನ್‌ಗೆ ತೆರಳಿದ ನಟ ಅಭಿಮನ್ಯು ಚೌಧರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ನಟ ಮತ್ತು ಆತನ ಗೆಳೆಯನನ್ನು ಬಂಧಿಸಲಾಗಿದ್ದು ಇವರೂ ಸೇರಿದಂತೆ ಅವರನ್ನು ಸ್ಥಳಕ್ಕೆ ಕರೆಸಿದ ಮಹಿಳೆಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 16ರಂದು ಈ ಘಟನೆ ನಡೆದಿದ್ದು, ನಟನ ಕೃತ್ಯದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವೀಡಿಯೊದಲ್ಲಿ, ಅಭಿಮನ್ಯು ಮತ್ತಾತನ ಗೆಳೆಯ ಸಲೂನ್ ಸಿಬ್ಬಂದಿಯನ್ನು ಥಳಿಸುತ್ತಿರುವ ಮತ್ತು ಈ ಜಗಳದಲ್ಲಿ ಸಲೂನ್‌ನ ಮಹಿಳಾ ಸಿಬ್ಬಂದಿಗೂ ಗಾಯವಾಗಿರುವುದು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಭಿಮನ್ಯು ಚೌದರಿಯ ಗೆಳತಿ ನೀಡಿದ ದೂರಿನ ಆಧಾರದಲ್ಲಿ ಸಲೂನ್‌ನ ಸಿಬ್ಬಂದಿ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News