ಜಗನ್ ರೆಡ್ಡಿ ಅವರನ್ನು ಭೇಟಿಯಾದ ಅಧಿಕಾರಿಗಳು, ಪಕ್ಷದ ನಾಯಕರು

Update: 2019-05-28 17:48 GMT

ಅಮರಾವತಿ, ಮೇ 28: ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಅವರನ್ನು ವಿವಿಧ ಅಧಿಕಾರಿಗಳು ಹಾಗೂ ಪಕ್ಷದ ನಾಯಕರು ಇಲ್ಲಿ ಸೋಮವಾರ ಭೇಟಿಯಾದರು.

ಹಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಜಗನ್ಮೋಹನ ರೆಡ್ಡಿ ಅವರ ನಿವಾಸಕ್ಕೆ ಸೋಮವಾರ ತೆರಳಿ ಭೇಟಿಯಾದರು. ಇವರಲ್ಲಿ ಹಲವು ಹಿರಿಯ ಅಧಿಕಾರಿಗಳು ಕೂಡ ಇದ್ದರು. ಸಭೆಯ ಬಳಿಕ ಹೈದರಾಬಾದ್ ಐಜಿ ಸ್ಟೀಫನ್ ರವೀಂದ್ರ ಹಾಗೂ ಆಂಧ್ರಪ್ರದೇಶದ ವಿಜಿಲೆನ್ಸ್‌ನ ಡಿ.ಜಿ. ಗೌತಮ್ ಸಾವಂಗ್ ಅವರು ಜಗನ್ಮೋಹನ ರೆಡ್ಡಿ ಅವರನ್ನು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ.

ಆಂಧ್ರಪ್ರದೇಶದ ಬೇಹುಗಾರಿಕೆಯ ವರಿಷ್ಠರನ್ನಾಗಿ ಸ್ಟೀವನ್ ರವೀಂದ್ರ ಅವರನ್ನು ಹಾಗೂ ಆಂಧ್ರಪ್ರದೇಶದ ಡಿಜಿಪಿಯನ್ನಾಗಿ ಗೌತಮ್ ಸಾವಂಗ್ ಅವರನ್ನು ನಿಯೋಜಿಸುವ ಸಾಧ್ಯತೆ ಇದೆ. ಈ ನಡುವೆ ಹಲವು ವೈಎಸ್‌ಆರ್‌ಸಿಪಿ ನಾಯಕರು ಕೂಡ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಈ ನಡುವೆ ಪಕ್ಷ ಗುಂಟೂರು ಹಾಗೂ ಶ್ರೀಕಾಕುಲಂ ಲೋಕಸಭಾ ಕ್ಷೇತ್ರದ ಮತ ಎಣಿಕೆ ಬಗ್ಗೆ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಗುಂಟೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ವೇಣುಗೋಪಾಲ ರೆಡ್ಡಿ, ಶ್ರೀಕಾಕುಲಂ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ. ಶ್ರೀನಿವಾಸ ಹಾಗೂ ಹಿರಿಯ ನಾಯಕರಾದ ವಿಜಯಸಾಯಿ ರೆಡ್ಡಿ, ಎಸ್. ರಾಮಕೃಷ್ಣ ರೆಡ್ಡಿ, ವೈಎಸ್‌ಐರ್‌ಸಿಪಿಯ ಹಲವು ನಾಯಕರು ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಟಿಡಿಎಸ್ ಜಯ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News