ಶಾಲೆ ತ್ಯಜಿಸಿ ಜೈನ ಸನ್ಯಾಸತ್ವ ಸ್ವೀಕರಿಸಿದ 12ರ ಬಾಲೆ

Update: 2019-05-29 16:20 GMT

ಸೂರತ್, ಮೇ 29: ಸೂರತ್‌ನ 12 ವರ್ಷದ ಬಾಲಕಿಯೋರ್ವಳು ಲೌಕಿಕ ಜೀವನ ತ್ಯಜಿಸಿ ಜೈನ ಸನ್ಯಾಸಿನಿಯಾಗಲು ನಿರ್ಧರಿಸಿದ್ದಾಳೆ. ‘‘ನಾವು ಅನುಭವಿಸುತ್ತಿರುವ ಲೌಕಿಕ ಪ್ರಪಂಚ ಶಾಶ್ವತವಲ್ಲ. ಇದು ತಾತ್ಕಾಲಿಕ. ಸರಳವಾಗಿ ಬದುಕುವುದೇ ಶಾಂತಿ ಹಾಗೂ ಮೋಕ್ಷಕ್ಕಿರುವ ದಾರಿ’’ ಎಂದು ಬಾಲಕಿ ಖುಷಿ ಹೇಳಿದ್ದಾಳೆ.

 ‘‘ನಾನು ಮಗುವಾಗಿದ್ದಾಗ, ನಮ್ಮ ಕುಟುಂಬದ ನಾಲ್ವರು ಈ ಶಾಂತಿ ಪಥವನ್ನು ಆರಿಸಿಕೊಂಡಿದ್ದಾರೆ. ಸಿಮಂಧರ್ ಸ್ವಾಮೀಜಿ ಅವರ ಪ್ರಕಾರ ನಮ್ಮ ಕುಟಂಬದ 8 ವರ್ಷದ ಮಗುವೊಂದು ಜೈನ ಸನ್ಯಾಸ ಸ್ವೀಕರಿಸಿದೆ. ನನಗೆ 12 ವರ್ಷ ಪ್ರಾಯ. ನಾನು ಬಹುಬೇಗನೆ ದೀಕ್ಷೆ ಪಡೆದುಕೊಳ್ಳಲು ಇದು ಕಾರಣ’’ ಎಂದು ಖುಷಿ ಹೇಳಿದ್ದಾಳೆ. ಸರಕಾರಿ ಉದ್ಯೋಗಿಯಾಗಿರುವ ಖುಷಿ ತಂದೆ, ‘‘ಈ ಎಳೆ ಪ್ರಾಯದಲ್ಲೇ ಆಕೆ ದಿವ್ಯ ದೃಷ್ಟಿ ಪಡೆದಿದ್ದಾಳೆ. ಇದು ಮಕ್ಕಳಲ್ಲಿ ಸಾಮಾನ್ಯವಾದುದಲ್ಲ. ಇದು ನಮಗೆ ಹೆಮ್ಮೆಯ ವಿಚಾರ. ಅವಳು ಸನ್ಯಾಸಿನಿ ಆದ ಬಳಿಕ ಲಕ್ಷಾಂತರ ಜನರ ಬದುಕಿನಲ್ಲಿ ಬೆಳಕು ಹರಡಲಿದ್ದಾಳೆ’’ ಎಂದಿದ್ದಾರೆ.

6ನೇ ತರಗತಿಯಲ್ಲಿ ಶೇ. 97 ಅಂಕಗಳನ್ನು ಪಡೆದ ಖುಷಿ ಸರಳ ಬದುಕು ಸಾಗಿಸಲು ಕಳೆದ ವರ್ಷ ನವೆಂಬರ್‌ನಲ್ಲಿ ಶಾಲೆ ತ್ಯಜಿಸಿದ್ದಾಳೆ. ಈಗಾಗಲೇ ಅವಳು ಸಾವಿರಾರು ಕಿ.ಮೀ. ದಾರಿಯನ್ನು ಬರಿಗಾಲಲ್ಲೇ ಕ್ರಮಿಸಿದ್ದಾಳೆ ಎಂದು ಶಾ ಹೇಳಿದ್ದಾರೆ. ಈ ನಡುವೆ ಖುಷಿಯ ತಾಯಿ, ‘‘ಅವಳು ವೈದ್ಯೆ ಆಗಬೇಕು ಎಂದು ನಾವು ಬಯಸಿದ್ದೆವು. ಆದರೆ, ಅವಳು ಜೈನ ಸನ್ಯಾಸಿನಿ ಆಗಲು ಬಯಸಿದ್ದಾಳೆ. ಅವಳ ಎಲ್ಲ ಬಯಕೆಗಳನ್ನು ಈಡೇರಿಸಲು ನಾವು ಬಯಸುತ್ತೇವೆ. ಆದುದರಿಂದ ಜೈನ ಸನ್ಯಾಸಿನಿ ಆಗುವ ಅವಳ ಬಯಕೆಯನ್ನು ಕೂಡ ನಾವು ಒಪ್ಪಿಕೊಂಡಿದ್ದೇವೆ. ಅವಳ ನಿರ್ಧಾರದ ಬಗ್ಗೆ ನಮಗೆ ಹೆಮ್ಮೆ ಇದೆ.’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News