ಅಮೆರಿಕ ಕರೆನ್ಸಿ ನಿಗಾ ಪಟ್ಟಿಯಿಂದ ಭಾರತ ಹೊರಕ್ಕೆ

Update: 2019-05-29 16:22 GMT

ವಾಶಿಂಗ್ಟನ್, ಮೇ.29: ಅಮೆರಿಕ ಆರ್ಥಿಕ ಇಲಾಖೆಯು ಪ್ರಮುಖ ವ್ಯಾಪಾರ ಜೊತೆಗಾರರ ತನ್ನ ಕರೆನ್ಸಿ ನಿಗಾ ಪಟ್ಟಿಯಿಂದ ಭಾರತವನ್ನು ಕೈಬಿಟ್ಟಿದೆ. ಆದರೆ ಚೀನಾ ಈಗಲೂ ಈ ಪಟ್ಟಿಯಲ್ಲಿ ಉಳಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಂತರ್‌ರಾಷ್ಟ್ರೀಯ ಆರ್ಥಿಕ ಮತ್ತು ವಿನಿಮಯ ದರ ನೀತಿಗಳ ಬಗ್ಗೆ ಆರ್ಥಿಕ ಇಲಾಖೆ ಅಮೆರಿಕ ಕಾಂಗ್ರೆಸ್‌ಗೆ ಮಂಗಳವಾರ ಸಲ್ಲಿಸಿದ ಅರ್ಧವಾರ್ಷಿಕ ವರದಿಯಲ್ಲಿ ಭಾರತ ಮತ್ತು ಸ್ವಿಝರ್‌ಲ್ಯಾಂಡನ್ನು ಪ್ರಶ್ನಾರ್ಹ ವಿದೇಶಿ ವಿನಿಮಯ ನೀತಿಗಳನ್ನು ಹೊಂದಿರುವ ದೇಶಗಳನ್ನು ಒಳಗೊಂಡ ತನ್ನ ಕರೆನ್ಸಿ ನಿಗಾ ಪಟ್ಟಿಯಿಂದ ಕೈಬಿಟ್ಟಿದೆ.

ಭಾರತ ಸೇರಿದಂತೆ ಚೀನಾ, ಜಪಾನ್, ಜರ್ಮನಿ, ಸ್ವಿಝರ್‌ಲ್ಯಾಂಡ್ ಮತ್ತು ದಕ್ಷಿಣ ಕೊರಿಯವನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ದ್ವಿವಾರ್ಷಿಕ ಕರೆನ್ಸಿ ನಿಗಾ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅಮೆರಿಕ ಈಗಲೂ ಚೀನಾವನ್ನು ಈ ಪಟ್ಟಿಯಲ್ಲಿ ಮುಂದುವರಿಸಿದ್ದು ತನ್ನ ನಿರಂತರ ದುರ್ಬಲ ಕರೆನ್ಸಿಯನ್ನು ಮೇಲೆತ್ತಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದೆ. ಚೀನಾ ಹೊರತಾಗಿ ಜಪಾನ್, ದಕ್ಷಿಣ ಕೊರಿಯ, ಜರ್ಮನಿ, ಐರ್‌ಲ್ಯಾಂಡ್, ಇಟಲಿ, ಮಲೇಶ್ಯಾ, ವಿಯೆಟ್ನಂ ಮತ್ತು ಸಿಂಗಾಪುರ ಕೂಡಾ ಕರೆನ್ಸಿ ನಿಗಾ ಪಟ್ಟಿಯಲ್ಲಿದೆ ಎಂದು ಆರ್ಥಿಕ ಇಲಾಖೆಯ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News