ಮಮತಾ ಬ್ಯಾನರ್ಜಿ ಟೀಕಿಸಿದ ವ್ಯಕ್ತಿಗೆ ಒಂದು ವಾರ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂ

Update: 2019-05-30 16:47 GMT

ಕೋಲ್ಕತಾ, ಮೇ 30: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಟೀಕಿಸಿ ಫೇಸ್‌ಬುಕ್‌ನಲ್ಲಿ ಬರಹವನ್ನು ಪೋಸ್ಟ್ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಅನೀರ್ಬನ್ ದಾಸ್‌ಗೆ ಸುಪ್ರೀಂಕೋರ್ಟ್ 7 ದಿನ ಬಂಧನದಿಂದ ರಕ್ಷಣೆಯನ್ನು ಒದಗಿಸಿದೆ.

 ಸರಕಾರದ ವಿರುದ್ಧ ಸಾಮಾನ್ಯ ಟೀಕೆ ಮಾಡಿದ್ದು ಇದಕ್ಕೆ ಆಕ್ಷೇಪ ವ್ಯಕ್ತವಾದ ಬಳಿಕ ಅಲಿಪುರ್‌ದ್ವಾರ್ ನಗರ ವಿಭಾಗದ ಯುವ ಟಿಎಂಸಿ ಅಧ್ಯಕ್ಷರಿಂದ ಲಿಖಿತ ರೂಪದಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದೇನೆ. ಆದರೂ ಪೊಲೀಸರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ಇದು ಅಭಿವ್ಯಕ್ತ ಸ್ವಾತಂತ್ರವನ್ನು ನಿಗ್ರಹಿಸುವ ಕ್ರಮವಾಗಿದೆ . ಇದೀಗ ತನಗೆ ಬಂಧನದ ಭೀತಿ ಎದುರಾಗಿದ್ದು ರಾಜ್ಯದಲ್ಲಿ ವಕೀಲರ ಮುಷ್ಕರದ ಕಾರಣ ನ್ಯಾಯಾಲಯದ ಕಾರ್ಯಕಲಾಪಕ್ಕೆ ಅಡ್ಡಿಯಾಗಿದೆ. ಆದ್ದರಿಂದ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ದಾಸ್ ಅರ್ಜಿ ಸಲ್ಲಿಸಿದ್ದರು. ಬ್ಯಾನರ್ಜಿಯನ್ನು ಟೀಕಿಸಿದ ಬರಹವನ್ನು ದಾಸ್ ಎಪ್ರಿಲ್ 24ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News