ಇಂಗ್ಲೆಂಡ್‌ಗೆ 104 ರನ್‌ಗಳ ಭರ್ಜರಿ ಜಯ
Update: 2019-05-30 22:24 IST
ಓವಲ್, ಮೇ 30: ಹನ್ನರೆಡನೇ ಆವೃತ್ತಿಯ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಇಂದು ದಕ್ಷಿಣ ಆಫ್ರಿಕ ವಿರುದ್ಧ ಇಂಗ್ಲೆಂಡ್ 104 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಗೆಲುವಿಗೆ 312 ರನ್‌ಗಳ ಕಠಿಣ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ 39.5 ಓವರ್ ಗಳಲ್ಲಿ 207 ರನ್ ಗಳಿಗೆ ಆಲೌಟಾಗುವುದರೊಂದಿಗೆ ಸೋಲು ಅನುಭವಿಸಿದೆ.
ಆಫ್ರಿಕದ ಆರಂಭಿಕ ದಾಂಡಿಗ ಕ್ವಿಂಟನ್ ಡೆ ಕಾಕ್ (68) ಮತ್ತು ರಾಸೈ ವಾನ್ ಡರ್ ಡುಸೆನ್ (54) ಅರ್ಧಶತಕಗಳು , ಆ್ಯಂಡಿಲೆ ಫೆಹ್ಲುಕ್ವಾಯೊ (24), ಏಡೆನ್ ಮಕ್ರಾಮ್(11) ಎರಡಂಕೆಯ ಕೊಡುಗೆ ನಡೆಸಿ ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ. ಇಂಗ್ಲೆಂಡ್ 311/8: ಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 311 ರನ್ ಗಳಿಸುವ ಮೂಲಕ ಹರಿಣ ಪಡೆ ಇಂಗ್ಲೆಂಡ್ ಕಠಿಣ ಸವಾಲು ವಿಧಿಸಿತ್ತು. .
ಆರಂಭಿಕ ದಾಂಡಿಗ ಜೇಸನ್ ರಾಯ್(54), ಜೋ ರೂಟ್(51), ಇಯಾನ್ ಮೊರ್ಗನ್ (57) ಮತ್ತು ಬೆನ್ ಸ್ಟೋಕ್ಸ್ (89)ಅರ್ಧಶತಕಗಳ ಕೊಡುಗೆ ನೀಡಿದರು.