ಬಿಜೆಪಿ ಗ್ರಂಥಾಲಯಕ್ಕೆ ಕುರ್‌ಆನ್

Update: 2019-05-30 17:19 GMT

ಹೊಸದಿಲ್ಲಿ, ಮೇ 29: ಅಲ್ಪಸಂಖ್ಯಾತರ ನಂಬಿಕೆ ಗಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ತನ್ನ ಪಕ್ಷದವರಲ್ಲಿ ವಿನಂತಿಸಿದ ಬಳಿಕ, ಬಿಜೆಪಿಯ ಉತ್ತರಾಖಂಡ ಕೇಂದ್ರ ಕಚೇರಿಯ ಗ್ರಂಥಾಲಯಕ್ಕೆ ಮುಸ್ಲಿಮರ ಪವಿತ್ರ ಗ್ರಂಥ ಕುರ್‌ಆನ್ ತರಲಾಗಿದೆ.

‘‘ಭಗವದ್ಗೀತೆ ಹಾಗೂ ಬೈಬಲ್‌ನ ಜೊತೆಗೆ ನಾನು ಕುರ್‌ಆನ್ ನ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಎರಡು ಪ್ರತಿಗಳನ್ನು ಸೋಮವಾರ ಇರಿಸಿದ್ದೇನೆ.’’ ಎಂದು ಇಲ್ಲಿನ ರಾಜ್ಯ ಬಿಜೆಪಿಯ ಮಾಧ್ಯಮ ಸಹ ಉಸ್ತುವಾರಿ ಶದಾಬ್ ಶಾಮ್ಸ್ ತಿಳಿಸಿದ್ದಾರೆ. ಇಸ್ಲಾಂ ಬಗ್ಗೆ ಯಾವುದೇ ತಪ್ಪು ಗ್ರಹಿಕೆ ಇದ್ದಲ್ಲಿ ಸ್ಪಷ್ಟಪಡಿಸಿಕೊಳ್ಳಲು ಈ ಪುಸ್ತಕವನ್ನು ಓದಿ ಎಂದು ಶಾಮ್ಸ್ ಎಲ್ಲ ಸಮುದಾಯದ ಜನರಲ್ಲಿ ಮನವಿ ಮಾಡಿದ್ದಾರೆ.

ಈ ಬೆಳವಣಿಗೆಯನ್ನು ಬಿಜೆಪಿಯ ರಾಜ್ಯಾಧ್ಯಕ್ಷ ಅಜಯ್ ಭಟ್ ಸ್ವಾಗತಿಸಿದ್ದಾರೆ. ಈ ಗ್ರಂಥಾಲಯವನ್ನು ಒಂದು ವರ್ಷದ ಹಿಂದೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News