ಹೊಸದಿಲ್ಲಿ: ಕಾಂಗ್ರೆಸ್ ಕೇಂದ್ರ ಕಚೇರಿ ಎದುರು ರಫೇಲ್ ಪ್ರತಿಕೃತಿ

Update: 2019-05-31 15:52 GMT

ಹೊಸದಿಲ್ಲಿ, ಮೇ 31: ಹೊಸದಿಲ್ಲಿಯಲ್ಲಿರುವ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ನಿವಾಸದ ಹೊರಭಾಗದಲ್ಲಿ ಭಾರತೀಯ ವಾಯು ಪಡೆ ರಫೇಲ್ ಯುದ್ಧ ವಿಮಾನದ ಪ್ರತಿಕೃತಿ ನಿರ್ಮಿಸಿದೆ.

ಹೊಸದಿಲ್ಲಿಯ ಅಕ್ಬರ್ ರಸ್ತೆಯಲ್ಲಿರುವ ಏರ್ ಮಾರ್ಷಲ್ ಅವರ ನಿವಾಸದ ಎದುರು ಕಾಂಗ್ರೆಸ್‌ನ ಕೇಂದ್ರ ಕಚೇರಿ ಇದೆ. ಈ ಹಿಂದೆ ರಫೇಲ್ ಯುದ್ಧ ವಿಮಾನದ ಪ್ರತಿಕೃತಿ ಇದೇ ಸ್ಥಳದಲ್ಲಿ ಇತ್ತು. ಆದರೆ, ಕೆಲವು ತಿಂಗಳ ಹಿಂದೆ ಅದನ್ನು ತೆಗೆಯಲಾಗಿತ್ತು. 2019 ಸೆಪ್ಟಂಬರ್‌ನಲ್ಲಿ ಭಾರತೀಯ ವಾಯು ಪಡೆಗೆ ಮೊದಲ ರಫೇಲ್ ಯುದ್ಧ ವಿಮಾನ ಹಸ್ತಾಂತರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಆದರೆ, ಈ ವಿಮಾನಗಳು 1500 ಗಂಟೆಗಳ ಕಾಲ ತೀವ್ರ ಪರಿಶೀಲನೆಗೆ ಒಳಗಾಗ ಬೇಕಾದ ಅಗತ್ಯ ಇದೆ. ಆದುದರಿಂದ ನಾಲ್ಕು ವಿಮಾನಗಳ ಮೊದಲ ಬ್ಯಾಚ್ 2020 ಮೇಯಲ್ಲಿ ಅಂಬಾಲಕ್ಕೆ ಆಗಮಿಸುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News