×
Ad

ಆಹಾರ ತಯಾರಿಸಲು ಶೌಚಾಲಯದ ನೀರು ಬಳಸಿದ ಇಡ್ಲಿ ಮಾರಾಟಗಾರ: ವೀಡಿಯೋ ವೈರಲ್

Update: 2019-06-01 18:25 IST

ಮುಂಬೈ, ಜೂ.1: ಬೊರಿವಿಲಿ ರೈಲ್ವೆ ನಿಲ್ದಾಣದ ಶೌಚಾಲಯದ ನೀರನ್ನು ಮುಂಬೈ ನಗರಿಯ ರಸ್ತೆ ಬದಿ ಇಡ್ಲಿ ಮಾರಾಟಗಾರನೊಬ್ಬ ಬಳಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಎಫ್‍ಡಿಎ  ತನಿಖೆ  ಆರಂಭಿಸಿದೆ.

ರಸ್ತೆ ಬದಿಯಲ್ಲಿ ಇಡ್ಲಿ ಮಾರಾಟ ಮಾಡುವ ಸ್ಟಾಲ್ ಹೊಂದಿರುವ ವ್ಯಕ್ತಿ  ಚಟ್ನಿ ತಯಾರಿಸಲೆಂದು ಶೌಚಾಲಯದ  ನೀರನ್ನು ಬಳಸುವುದನ್ನು ತೋರಿಸುವ 45 ಸೆಕೆಂಡ್ ಅವಧಿಯ ವೀಡಿಯೋದಲ್ಲಿ ಈ ಘಟನೆ ಯಾವಾಗ ನಡೆದಿದೆಯೆಂಬ ಮಾಹಿತಿ ಮಾತ್ರ ಇಲ್ಲ.

ಶೌಚಾಲಯದ ನೀರು ಮಲಿನವಾಗಿರುವ ಸಾಧ್ಯತೆಯಿರುವುದರಿಂದ ಅಂತಹ ನೀರನ್ನು ಆಹಾರ ತಯಾರಿಸಲು ಬಳಸುವುದರ ವಿರುದ್ಧ ಎಫ್‍ಡಿಎ ಎಚ್ಚರಿಕೆ ನೀಡಿದೆ.

``ಈ ವೀಡಿಯೋದಲ್ಲಿ ಕಾಣಿಸಿದ ವ್ಯಕ್ತಿ ಹಾಗೂ ಇದೇ ರೀತಿ  ಮಲಿನ ನೀರನ್ನು ಬಳಸಿ ಆಹಾರ ತಯಾರಿಸುವವರ ವಿರುದ್ಧ ತನಿಖೆ ನಡೆಸುತ್ತೇವೆ. ಇಂತಹ ನೀರಿನಿಂದ ಅರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು, ಆ ವ್ಯಕ್ತಿ ಸಿಕ್ಕರೆ ಆತನ ಪರವಾನಗಿ ಪರಿಶೀಲಿಸಲಾಗುವುದು, ಅತನ ಬಳಿ ಆಹಾರ ಪತ್ತೆಯಾದರೆ ಅದರ ಮಾದರಿ ಸಂಗ್ರಹಿಸಲಾಗುವುದು'' ಎಂದು ಎಫ್‍ ಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಯಾವಾಗ ನಡೆದಿದೆಯೆಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News