ನೆರೆ ದೇಶಗಳನ್ನು ಬೆದರಿಸಬೇಡಿ: ಚೀನಾಕ್ಕೆ ಅಮೆರಿಕ ಎಚ್ಚರಿಕೆ

Update: 2019-06-01 16:17 GMT

ಸಿಂಗಾಪುರ, ಜೂ. 1: ನೆರೆಹೊರೆಯ ದೇಶಗಳ ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕುವುದರ ವಿರುದ್ಧ ಅಮೆರಿಕವು ಶನಿವಾರ ಚೀನಾಕ್ಕೆ ಎಚ್ಚರಿಕೆ ನೀಡಿದೆ ಹಾಗೂ ಏಶ್ಯ ಖಂಡದಲ್ಲಿ ಸ್ಥಿರತೆ ತರುವುದಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ತಾನು ನೂತನ ಸೇನಾ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದಾಗಿ ಅದು ಹೇಳಿದೆ.

ದಕ್ಷಿಣ ಚೀನಾ ಸಮುದ್ರ, ಕೊರಿಯ ಪರ್ಯಾಯ ದ್ವೀಪ ಮತ್ತು ತೈವಾನ್ ಜಲಸಂಧಿ ಮುಂತಾದ ವಿವಾದಾಸ್ಪದ ಭೂ-ಜಲಪ್ರದೇಶಗಳನ್ನು ಒಳಗೊಂಡ ವಲಯದ ಮೇಲಿನ ನಿಯಂತ್ರಣಕ್ಕಾಗಿ ಚೀನಾ ಮತ್ತು ಅಮೆರಿಕಗಳು ಸ್ಪರ್ಧಿಸುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಸಿಂಗಾಪುರದಲ್ಲಿ ನಡೆಯುತ್ತಿರುವ ‘ಶಾಂಗ್ರಿ-ಲಾ’ ಸಮ್ಮೇಳನದಲ್ಲಿ ಅಮೆರಿಕದ ಉಸ್ತುವಾರಿ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶನಹನ್ ಈ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News