ಸಚಿವ ಕಟಾರಿಯಾರ ರಾಜೀನಾಮೆ ಕೊಡುಗೆ ತಿರಸ್ಕರಿಸಿದ ರಾಜಸ್ಥಾನ ಸಿಎಂ
Update: 2019-06-01 21:50 IST
ಜೈಪುರ,ಜೂ.1: ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಸಾಧನೆಯ ಹಿನ್ನೆಲೆಯಲ್ಲಿ ಕೃಷಿಸಚಿವ ಲಾಲಚಂದ ಕಟಾರಿಯಾರ ರಾಜೀನಾಮೆಯ ಕೊಡುಗೆಯನ್ನು ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ತಿರಸ್ಕರಿಸಿದ್ದಾರೆ.
ಕಟಾರಿಯಾ ಶುಕ್ರವಾರ ಸಂಜೆ ಮುಖ್ಯಮಂತ್ರಿಗಳ ನಿವಾಸದಲ್ಲಿ ಅವರನ್ನು ಭೇಟಿಯಾಗಿ ರಾಜೀನಾಮೆಯ ಕೊಡುಗೆಯನ್ನು ಪುನರುಚ್ಚರಿಸಿದ್ದರು. ಆದರೆ ಮುಖ್ಯಮಂತ್ರಿಗಳು ಅದನ್ನು ತಿರಸ್ಕರಿಸಿದ್ದು, ಹುದ್ದೆಯಲ್ಲಿ ಮುಂದುವರಿಯುವಂತೆ ಮತ್ತು ಉತ್ತಮ ಆಡಳಿತ ನೀಡುವುದರಲ್ಲಿ ಪಾತ್ರ ವಹಿಸುವಂತೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿದವು.
ಕಟಾರಿಯಾ ಅವರು ತಾನು ರಾಜೀನಾಮೆ ನೀಡುವುದಾಗಿ ಕಳೆದ ರವಿವಾರ ಪ್ರಕಟಿಸಿದ್ದರು ಮತ್ತು ಅವರದ್ದೆನ್ನಲಾದ ರಾಜೀನಾಮೆ ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆದರೆ ಇಂತಹ ಯಾವುದೇ ಪತ್ರ ತಮಗೆ ತಲುಪಿರುವುದನ್ನು ಮುಖ್ಯಮಂತ್ರಿಗಳ ಕಚೇರಿ ಮತ್ತು ರಾಜಭವನ ತಿರಸ್ಕರಿಸಿದ್ದವು.