2020-21ರಲ್ಲಿ ಚಂದ್ರನಲ್ಲಿಗೆ ಸಲಕರಣೆ ಸಾಗಿಸಲು ‘ನಾಸಾ’ ಯೋಜನೆ

Update: 2019-06-01 16:40 GMT

ವಾಶಿಂಗ್ಟನ್, ಜೂ. 1: 2024ರ ಉದ್ದೇಶಿತ ಮಾನವಯಾನಕ್ಕೆ ಪೂರಕವಾಗಿ, 2020 ಮತ್ತು 2021ರಲ್ಲಿ ಚಂದ್ರನ ಮೇಲ್ಮೈಗೆ ಉಪಕರಣಗಳನ್ನು ಸಾಗಿಸಲು ಅಮೆರಿಕವು ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಶುಕ್ರವಾರ ಹೇಳಿದೆ.

1970ರ ದಶಕದ ಬಳಿಕ, ಮೊದಲ ಬಾರಿಗೆ ಚಂದ್ರಯಾನ ಚಟುವಟಿಕೆಗಳು ನಡೆಯುತ್ತಿವೆ.

‘ಆರ್ಟೆಮಿಸ್’ ಕಾರ್ಯಕ್ರಮದ ಭಾಗವಾಗಿ ಚಂದ್ರನಲ್ಲಿಗೆ ವೈಜ್ಞಾನಿಕ ಉಪಕರಣಗಳನ್ನು ಕಳುಹಿಸಲು ನಾಸಾವು ಆ್ಯಸ್ಟ್ರೋಬಾಟಿಕ್, ಇನ್‌ಟ್ಯೂಟಿವ್ ಮಶೀನ್ಸ್ ಮತ್ತು ಆರ್ಬಿಟ್ ಬಿಯಾಂಡ್ ಎಂಬ ಅಮೆರಿಕನ್ ಕಂಪೆನಿಗಳನ್ನು ಆಯ್ಕೆ ಮಾಡಿದೆ.

ಮಾನವರನ್ನು ಮತ್ತೆ ಚಂದ್ರನ ಮೇಲ್ಮೈಗೆ ಕಳುಹಿಸುವ ವೇಳಾಪಟ್ಟಿಯನ್ನು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಪುನರ್ರಚಿಸಿದೆ. ಚಂದ್ರನಲ್ಲಿಗೆ ಮಾನವ ಯಾನವನ್ನು ನಾಲ್ಕು ವರ್ಷಗಳ ಕಾಲ ಹಿಂದೂಡಿ ಈಗ 2024ಕ್ಕೆ ನಿಗದಿಪಡಿಸಿದೆ.

ನಾಸಾ ಆಯ್ಕೆ ಮಾಡಿರುವ ಮೂರು ಕಂಪೆನಿಗಳು ವಿವಿಧ ಗಾತ್ರಗಳು ಮತ್ತು ಆಕಾರಗಳ ಚಂದ್ರ ನೌಕೆಗಳನ್ನು ಅಭಿವೃದ್ಧಿಪಡಿಸಿವೆ.

ಈ ನೌಕೆಗಳು ನಾಸಾ ಒದಗಿಸುವ ಸುಮಾರು 23 ಸರಕುಗಳನ್ನು ಚಂದ್ರನಲ್ಲಿಗೆ ತಲುಪಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News