ನಾಳೆ ಸಿಯಾಚಿನ್‌ಗೆ ಭೇಟಿ ನೀಡಲಿದ್ದಾರೆ ರಾಜನಾಥ್ ಸಿಂಗ್

Update: 2019-06-02 07:45 GMT

ಹೊಸದಿಲ್ಲಿ, ಜೂ.2: ನೂತನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಷ್ಟ್ರೀಯ ರಾಜಧಾನಿಯ ಹೊರಗೆ ತನ್ನ ಮೊದಲ ಭೇಟಿಯನ್ನು ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ಗೆ ತೆರಳುವ ಮೂಲಕ ಆರಂಭಿಸಲಿದ್ದಾರೆ.

ಭೇಟಿಯ ವೇಳೆ ಪಾಕಿಸ್ತಾನದ ಗಡಿಯುದ್ದಕ್ಕೂ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಭಾರತೀಯ ವಾಯು ಸೇನೆಯ ನೆರವಿನಿಂದ ನಡೆಸಲಾದ ಕಾರ್ಯಾಚರಣೆಯ ಬಗ್ಗೆ ವಿವರ ಪಡೆಯಲಿದ್ದಾರೆ.

ಸಿಯಾಚಿನ್ ಪರಿಸ್ಥಿತಿಯ ಬಗ್ಗೆ ಉತ್ತರ ಸೇನಾ ಮುಖ್ಯಸ್ಥ ಕಮಾಂಡರ್ ಲೆ.ಜ.ರಣಬೀರ್ ಸಿಂಗ್, 14 ಕಾರ್ಪ್ಸ್ ಕಮಾಂಡರ್ ಹಾಗೂ ಕಾರ್ಗಿಲ್ ಯುದ್ದದ ಹೀರೊ ಲೆ.ಜ.ವೈ.ಕೆ. ಜೋಶಿ ವಿವರಣೆ ನೀಡಲಿದ್ದಾರೆ.

 ಭೇಟಿಯ ವೇಳೆ ರಕ್ಷಣಾ ಸಚಿವರ ಜೊತೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ರಕ್ಷಣಾ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸಿಯಾಚಿನ್‌ಗೆ ತೆರಳಲಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News