×
Ad

ಕೇರಳದ ಯುವಕನಲ್ಲಿ ಕಾಣಿಸಿಕೊಂಡ ಶಂಕಿತ ‘ನಿಪಾಹ್’ ಲಕ್ಷಣಗಳು

Update: 2019-06-02 16:43 IST
ಫೈಲ್ ಚಿತ್ರ

ಹೊಸದಿಲ್ಲಿ, ಜೂ.2: ಕಳೆದ ವರ್ಷ ಕೇರಳದಲ್ಲಿ ಹಲವು ಪ್ರಾಣಗಳನ್ನು ಬಲಿ ಪಡೆದಿದ್ದ ನಿಪಾಹ್ ವೈರಸ್ ಇದೀಗ ಮತ್ತೊಮ್ಮೆ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಎರ್ನಾಕುಳ ಜಿಲ್ಲೆಯಲ್ಲಿ ಯುವಕನೋರ್ವನಲ್ಲಿ ಶಂಕಿತ ನಿಪಾಹ್ ವೈರಸ್ ಲಕ್ಷಣಗಳು ಕಾಣಿಸಿಕೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಪಾಹ್ ಲಕ್ಷಣಗಳನ್ನು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 23 ವರ್ಷದ ಯುವಕನನ್ನು ಖಾಸಗಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ. ಸದ್ಯದ ಮಟ್ಟಿಗೆ ಹೆದರುವ ಯಾವುದೇ ಅವಶ್ಯಕತೆಯಿಲ್ಲ. ಸೋಮವಾರ ಪರೀಕ್ಷಾ ವರದಿಗಳು ಲಭಿಸಲಿವೆ ಎಂದು ಎರ್ನಾಕುಳಂ ಜಿಲ್ಲಾ ವೈದ್ಯಾಧಿಕಾರಿ ಡಾ.ಎಂ.ಕೆ. ಕುಟ್ಟಪ್ಪನ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News