ದಿಲ್ಲಿಯಲ್ಲಿ ಅಗ್ನಿ ಅವಘಡ : ಕನಿಷ್ಠ 50 ಕಾರುಗಳ ಭಸ್ಮ

Update: 2019-06-02 17:11 GMT

ಹೊಸದಿಲ್ಲಿ, ಜೂ. 2: ಸಾಗರಪುರದ ಪೊಲೀಸ್ ಠಾಣೆಯ ಅಂಗಣದಲ್ಲಿ ಶನಿವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 50ಕ್ಕೂ ಅಧಿಕ ಕಾರುಗಳು ಅಗ್ನಿಗಾಹುತಿಯಾಗಿವೆ. ದಿಲ್ಲಿ ಪೊಲೀಸ್‌ನ ಮೈದಾನದಲ್ಲಿ ಈ ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು. ಶನಿವಾರ ಸಂಜೆ ಈ ಅಗ್ನಿ ಅವಘಡ ಸಂಭವಿಸಿದೆ.

ಅಗ್ನಿ ಅವಘಡದಿಂದ ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ. ಅಗ್ನಿ ಅನಾಹುತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಹಲವು ಅಗ್ನಿ ಶಾಮಕ ದಳದ ವಾಹನಗಳು ಬೆಂಕಿ ನಂದಿಸುವಲ್ಲಿ ಸಫಲವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News