ಬಿಜೆಪಿ ಕಚೇರಿಯ ಗೋಡೆ ಮೇಲೆ ಟಿಎಂಸಿ ಚಿಹ್ನೆ ರಚಿಸಿದ ಮಮತಾ ಬ್ಯಾನರ್ಜಿ: ವಿಡಿಯೋ ವೈರಲ್

Update: 2019-06-03 07:10 GMT

ಕೊಲ್ಕತ್ತಾ, ಜೂ.3: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಿಜೆಪಿ ಕಚೇರಿಗೆ ತೆರಳಿ ಗೋಡೆಯಲ್ಲಿ ತಮ್ಮ ಪಕ್ಷ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ -ಹೆಸರು ಹಾಗೂ ಚಿಹ್ನೆಯನ್ನು ರಚಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ಮೇ 30ರಂದು ನಾರ್ತ್ 24 ಪರಗಣ ಜಿಲ್ಲೆಯ ನೈಹತಿ ಪ್ರದೇಶದಲ್ಲಿ ನಡೆದಿದೆ.

ಇದು ಮೂಲತಃ ಟಿಎಂಸಿ ಕಚೇರಿಯಾಗಿದ್ದು, ಬ್ಯಾರಕ್‍ ಪೋರ್ ನಿಂದ ಸ್ಪರ್ಧಿಸಿದ್ದ ಬಿಜೆಪಿಯ ಅರ್ಜುನ್  ಸಿಂಗ್ ಟಿಎಂಸಿ ಅಭ್ಯರ್ಥಿ ದಿನೇಶ್ ತ್ರಿವೇದಿಯನ್ನು ಸೋಲಿಸಿದ ನಂತರ ಅದನ್ನು ಸಿಂಗ್ ಬೆಂಬಲಿಗರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು ಎಂಟು ಟಿಎಂಸಿ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.

ಮೇ 30ರಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡನೇ ಅಧಿಕಾರಾವಧಿಯ  ಪ್ರಮಾಣವಚನ ಸ್ವೀಕರಿಸುತ್ತಿದ್ದರೆ ಇತ್ತ ನೈಹತಿ ಪ್ರದೇಶದಲ್ಲಿ ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸುತ್ತಿದ್ದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಮತಾ, ಬಿಜೆಪಿ ಕಚೇರಿಗೆ ತೆರಳಿ ಬ್ರಶ್ ಮೂಲಕ ಕಪ್ಪು ಬಣ್ಣದಲ್ಲಿ ತಮ್ಮ ಪಕ್ಷದ ಚಿಹ್ನೆ ಹಾಗೂ ಹೆಸರನ್ನು ಕೇಸರಿ ಬಣ್ಣದ ಗೋಡೆ ಮೇಲೆ ಬರೆದಿದ್ದಾರೆ.

ಬಿಜೆಪಿ ಇತ್ತೀಚಿಗಿನ ಲೋಕಸಭಾ ಚುನಾವಣೆಯಲ್ಲಿ 18 ಸ್ಥಾನಗಳನ್ನು ಪಡೆದ ಬಳಿಕ ರಾಜ್ಯದ ಬ್ಲಾಕ್ ಮತ್ತು ಗ್ರಾಮ ಮಟ್ಟದಲ್ಲಿ ಹಲವು ಕಡೆಗಳಲ್ಲಿ ಟಿಎಂಸಿ ಕಚೇರಿಗಳಿಗೆ ಬಿಜೆಪಿ  ಬಣ್ಣ ಬಳಿಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಟಿಎಂಸಿ ಘಟಕಗಳು ಕಾರ್ಯಾಚರಿಸುತ್ತಿದ್ದ ಕೆಲ ಕಟ್ಟಡಗಳ ಮಾಲಕರು ಟಿಎಂಸಿಯಿಂದ ಬಿಜೆಪಿ ಸೇರಿದ ನಂತರ  ಆ ಕಟ್ಟಡಗಳಲ್ಲಿದ್ದ ಟಿಎಂಸಿ ಘಟಕಗಳನ್ನು ಬಿಜೆಪಿ ಘಟಕಗಳ ಕಚೇರಿಗಳನ್ನಾಗಿ ಪರಿವರ್ತಿಸಲಾಗಿದೆ ಎಂದೂ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News