ದಿಲ್ಲಿಯಲ್ಲಿ ಬಸ್, ಮೆಟ್ರೋಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ: ಕೇಜ್ರಿವಾಲ್
Update: 2019-06-03 13:26 IST
ಹೊಸದಿಲ್ಲಿ, ಜೂ.3: ರಾಜಧಾನಿ ದಿಲ್ಲಿಯಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲು ದಿಲ್ಲಿಯ ರಾಜ್ಯ ಸರಕಾರ ಚಿಂತನೆ ನಡೆಸಿದೆ.
ಬಸ್ ನಲ್ಲಿ ಮತ್ತು ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲಾ ನೇತೃತ್ವದ ಆಪ್ ಸರಕಾರ ಈ ಯೋಜನೆ ರೂಪಿಸಿದೆ.
ವಾರದೊಳಗಾಗಿ ಸರಕಾರದ ಈ ನಿರ್ಧಾರ ಜಾರಿಗೆ ಬರಲಿದೆ ಎಂದು ತಿಳಿದು ಬಂದಿದೆ