2018-19ರಲ್ಲಿ 71,500 ಕೋ.ರೂ. ತಲುಪಿದ ಬ್ಯಾಂಕ್ ವಂಚನೆ ಮೊತ್ತ: ಆರ್ ಬಿಐ ಬ್ಯಾಂಕ್

Update: 2019-06-03 16:11 GMT

ಹೊಸದಿಲ್ಲಿ, ಜೂ.3: 2018-19ರ ಸಾಲಿನಲ್ಲಿ 6,800 ಬ್ಯಾಂಕ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಒಟ್ಟು 71,500 ಕೋಟಿ ರೂ. ಹಣವನ್ನು ಬ್ಯಾಂಕ್‌ಗಳಿಗೆ ವಂಚಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

2017-18ರಲ್ಲಿ 5,916 ಬ್ಯಾಂಕ್ ವಂಚನೆ ಪ್ರಕರಣಗಳು ದಾಖಲಾಗಿದ್ದು, 41,167.03 ಕೋಟಿ ರೂ. ಹಣವನ್ನು ಬ್ಯಾಂಕ್‌ಗಳಿಗೆ ವಂಚಿಸಲಾಗಿದೆ ಎಂದು ಅದು ತಿಳಿಸಿದೆ. ಕಳೆದ ವಿತ್ತೀಯ ವರ್ಷದಲ್ಲಿ ನಿಗದಿತ ವಾಣಿಜ್ಯ ಬ್ಯಾಂಕ್‌ಗಳು ಮತ್ತು ಆಯ್ದ ಆರ್ಥಿಕ ಸಂಸ್ಥೆಗಳಲ್ಲಿ 6,801 ಹಣ ವಂಚನೆ ಪ್ರಕರಣಗಳು ವರದಿಯಾಗಿದ್ದು ಇವುಗಳ ಒಟ್ಟು ಮೊತ್ತ 71,542.93 ಕೋಟಿ ರೂ. ಆಗಿದೆ ಎಂದು ರಿಸರ್ವ್ ಬ್ಯಾಂಕ್ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರವಾಗಿ ತಿಳಿಸಿದೆ.

ಕಳೆದ 11 ವಿತ್ತೀಯ ವರ್ಷಗಳಲ್ಲಿ ಒಟ್ಟು 53,334 ಬ್ಯಾಂಕ್ ಹಣ ವಂಚನೆ ಪ್ರಕರಣಗಳು ವರದಿಯಾಗಿದ್ದು, ಇವುಗಳ ಒಟ್ಟು ಮೊತ್ತ 2.05 ಲಕ್ಷ ಕೋಟಿ ರೂ. ಎಂದು ಕೇಂದ್ರೀಯ ಬ್ಯಾಂಕ್ ‌ನ ಅಂಕಿಅಂಶಗಳು ತಿಳಿಸಿವೆ. ರಿಸರ್ವ್ ಬ್ಯಾಂಕ್ ವರದಿ ಮಾಡುವ ವಂಚನೆ ಪ್ರಕರಣಗಳನ್ನು ಬ್ಯಾಂಕ್ ‌ಗಳು ಕಾನೂನು ಜಾರಿ ಸಂಸ್ಥೆಗಳಲ್ಲಿ ಕ್ರಿಮಿನಲ್ ಪ್ರಕರಣವಾಗಿ ದಾಖಲಿಸಬೇಕಾಗುತ್ತದೆ. ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಮತ್ತು ಮದ್ಯದ ದೊರೆ ವಿಜಯ್ ಮಲ್ಯ ಸೇರಿದಂತೆ ಅನೇಕ ಪ್ರತಿಷ್ಠಿತ ಜನರು ಅನೇಕ ಸಾವಿರ ಕೋಟಿ ರೂ.ಗಳನ್ನು ವಂಚಿಸಿರುವ ಪರಿಣಾಮವಾಗಿ ಬ್ಯಾಂಕ್‌ಗಳು  ಸಂಕಷ್ಟಕ್ಕೀಡಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News