ರ‍್ಯಾಲಿಯಲ್ಲಿ ಶಸ್ತ್ರಾಸ್ತ್ರಗಳ ಪ್ರದರ್ಶನ: ವಿಹಿಂಪದ 200ಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ಪ್ರಕರಣ

Update: 2019-06-03 16:44 GMT

ಪುಣೆ,ಜೂ.3: ಪುಣೆಯ ಪಿಂಪ್ರಿ ಚಿಂಚ್ವಾಡಾದಲ್ಲಿ ರವಿವಾರ ಸಂಜೆ ನಡೆದ ರ‍್ಯಾಲಿಯೊಂದರಲ್ಲಿ ಏರ್ ರೈಫಲ್‌ಗಳು ಮತ್ತು ಖಡ್ಗಗಳನ್ನು ಝಳಪಿಸಿದ್ದಕ್ಕಾಗಿ ಪೊಲೀಸರು 200ಕ್ಕೂ ಅಧಿಕ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಅನುಮತಿ ನಿರಾಕರಿಸಿದ್ದರೂ ವಿಹಿಂಪ ಯಮುನಾ ನಗರ ಪ್ರದೇಶದಲ್ಲಿ ಶೋಭಾಯಾತ್ರೆಯನ್ನು ನಡೆಸಿದೆ. ನಾಲ್ವರು ಯುವತಿಯರು ಕೈಗಳಲ್ಲಿ ಏರ್ ರೈಫಲ್‌ಗಳನ್ನು ಹಿಡಿದುಕೊಂಡಿದ್ದು ಮತ್ತು ಐವರು ಯುವತಿಯರು ಖಡ್ಗಗಳನ್ನು ಝಳಪಿಸುತ್ತಿದ್ದನ್ನು ನಾವು ಗಮನಿಸಿದ್ದೇವೆ ಎಂದು ನಿಗದಿ ಪೊಲೀಸ್ ಠಾಣೆಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಸಂಘಟನೆಯ ಸ್ಥಳೀಯ ಅಧ್ಯಕ್ಷ ಶರದ ಇನಾಮದಾರ್ ಮತ್ತು ಜಿಲ್ಲಾ ಅಧ್ಯಕ್ಷ ಧನಾಜಿ ಶಿಂದೆ ಸೇರಿದಂತೆ ವಿಹಿಂಪ ಕಾರ್ಯಕರ್ತರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಬಾಂಬೆ ಪೊಲೀಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ರ‍್ಯಾಲಿಯು ಮೇ 21ರಿಂದ ಜೂ.3ರವರೆಗೆ ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News