ಜಮ್ಮು: ರೊಹಿಂಗ್ಯಾ ನಿರಾಶ್ರಿತರ ಜೋಪಡಿಗೆ ಬೆಂಕಿ

Update: 2019-06-03 17:46 GMT
ಸಾಂದರ್ಭಿಕ ಚಿತ್ರ

ಜಮ್ಮು, ಜೂ.3: ಜಮ್ಮುವಿನಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸುಮಾರು 150 ಜೋಪಡಿಗಳು ಬೆಂಕಿಗಾಹುತಿಯಾಗಿದ್ದು ಇದರಲ್ಲಿ 41 ಜೋಪಡಿಗಳಲ್ಲಿ ರೊಹಿಂಗ್ಯಾ ನಿರಾಶ್ರಿತರು ವಾಸವಿದ್ದರು.

ಮಧ್ಯರಾತ್ರಿ ಕಳೆದು ಸುಮಾರು 1 ಗಂಟೆಯ ವೇಳೆಗೆ ಜೋಪಡಿಗಳಲ್ಲಿ ಬೆಂಕಿಯ ಜ್ವಾಲೆ ಕಂಡು ಬಂದಿದೆ. ಗ್ಯಾಸ್ ಸಿಲಿಂಡರ್‌ಗಳು ಹಾಗೂ ರೆಫ್ರಿಜರೇಟರ್‌ಗಳು ಬೆಂಕಿಯ ಉರಿಯಲ್ಲಿ ಸ್ಫೋಟಿಸಿದವು. ಸುಮಾರು 1 ಗಂಟೆಯ ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಯಂತ್ರಗಳು ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿತು. ಸುಮಾರು 150 ಜೋಪಡಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿದ್ದ ರೊಹಿಂಗ್ಯಾ ನಿರಾಶ್ರಿತರ 54 ಜೋಪಡಿಗಳಲ್ಲಿ 41 ಸುಟ್ಟು ಬೂದಿಯಾಗಿದೆ. ವೇಗವಾಗಿ ಗಾಳಿ ಬೀಸುತ್ತಿದ್ದ ಕಾರಣ ಬೆಂಕಿ ನಂದಿಸುವ ಕಾರ್ಯ ಸಫಲವಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News