ಕೇರಳದ ಯುವಕನಿಗೆ ನಿಪಾಹ್ ಸೋಂಕು: ದೃಢಪಡಿಸಿದ ಸರಕಾರ

Update: 2019-06-04 06:03 GMT

ಹೊಸದಿಲ್ಲಿ, ಜೂ.4: ಕೇರಳದ ಎರ್ನಾಕುಲಂನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿರುವ 23ರ ಹರೆಯದ ಯುವಕನಿಗೆ ಮಾರಣಾಂತಿಕ ನಿಪಾಹ್ ವೈರಸ್ ಸೋಕು ತಗಲಿದೆ ಎಂದು ಸರಕಾರದ ದೃಢಪಡಿಸಿದೆ. ಕಳೆದ ವರ್ಷ ಕಾಣಿಸಿಕೊಂಡ ಈ ವೈರಸ್‌ಗೆ ಕೇರಳದಲ್ಲಿ 17 ಮಂದಿ ಸಾವನ್ನಪ್ಪಿದ್ದರು.

 ಆಸ್ಪತ್ರೆಗೆ ದಾಖಲಾಗಿದ್ದ ಯುವಕನ ರಕ್ತ ಮಾದರಿಯನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ಆತನ ರಕ್ತದಲ್ಲಿ ವೈರಸ್ ಇರುವುದು ಖಚಿತವಾಗಿದೆ. ಇಬ್ಬರು ನರ್ಸ್‌ಗಳ ಸಹಿತ ಇನ್ನೂ ನಾಲ್ಕು ಮಂದಿ ಜ್ವರದಿಂದ ಬಳಲುತ್ತಿದ್ದಾರೆ. ಇಬ್ಬರು 23ರ ಹರೆಯದ ಯುವಕನೊಟ್ಟಿಗೆ ಸಂಪರ್ಕದಲ್ಲಿದ್ದವರು.

 ‘‘ಜನರು ಗಾಬರಿಪಡಬಾರದು. ವೈರಸ್ ದೃಢವಾಗುವ ಮೊದಲೇ ಮುನ್ನಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ’’ ಎಂದು ಆರೋಗ್ಯ ಸಚಿವೆ ಶೈಲಜಾ ತಿಳಿಸಿದ್ದಾರೆ.

ನಿಪಾಹ್ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ವರ್ಗಾವಣೆಯಾಗುತ್ತದೆ. ಆ ಬಳಿಕ ಜನರಿಂದ ಜನರಿಗೆ ಹರಡುತ್ತದೆ. ನಿಪಾಹ್ ವೈರಸ್ ಆರಂಭಿಕ ಹಂತದಲ್ಲಿ ಜ್ವರ, ತಲೆನೋವು, ಮಾಂಸಖಂಡ ನೋವು, ತಲೆ ತಿರುಗುವಿಕೆ ಹಾಗೂ ವಾಕರಿಕೆ ಲಕ್ಷಣ ಕಾಣಿಸಿಕೊಳ್ಳುತ್ತವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News