ಸರಕಾರಿ ಸಭೆಯ ಚರ್ಚೆಯ ಮಧ್ಯೆ ಅಶ್ಲೀಲ ದೃಶ್ಯ ಪ್ರಸಾರ: ತನಿಖೆಗೆ ಆದೇಶ
Update: 2019-06-04 20:51 IST
ಜೈಪುರ,ಜೂ.4: ರಾಜಸ್ತಾನದ ಜೈಪುರದಲ್ಲಿ ವೀಡಿಯೊ ಆಧಾರಿತ ಸಭೆಯ ಮಧ್ಯೆ ಅಶ್ಲೀಲ ದೃಶ್ಯ ಪ್ರಸಾರವಾಗುವ ಮೂಲಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಮುಜುಗರಕ್ಕೀಡಾದ ಘಟನೆ ನಡೆದಿದೆ.
ಜೈಪುರದಲ್ಲಿ ಕಾರ್ಯದರ್ಶಿಗಳ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಇಲಾಕೆಯ ಕಾರ್ಯದರ್ಶಿ ಮುಗ್ಧಾ ಸಿಂಗ್ ವಹಿಸಿದ್ದರು. ಸದ್ಯ ಅವರು ಈ ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ಕೋಣೆಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಎನ್‌ಐಸಿ ಪ್ರತಿನಿಧಿಗಳು ಸೇರಿ ಸುಮಾರು ಹತ್ತು ಮಂದಿ ಹಾಜರಿದ್ದರು ಮತ್ತು ರಾಜ್ಯದ 33 ಜಿಲ್ಲೆಗಳ ಪೂರೈಕೆದಾರ ಅಧಿಕಾರಿಗಳು ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಸಿಂಗ್ ತಿಳಿಸಿದ್ದಾರೆ. ಎನ್‌ಐಸಿ ನಿರ್ದೇಶಕರ ವರದಿಯ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.