×
Ad

ಖ್ಯಾತ ಬಾಣಸಿಗ, ಲೇಖಕ ಜಿಗ್ಸ್ ಕಾಲ್ರ ನಿಧನ

Update: 2019-06-04 20:55 IST

ಹೊಸದಿಲ್ಲಿ, ಜೂ.4: ಖ್ಯಾತ ಬಾಣಸಿಗ, ಹೋಟೆಲ್ ಮಾಲಕ, ಲೇಖಕ ಮತ್ತು ಆಹಾರತಜ್ಞ ಜಿಗ್ಸ್ ಕಾಲ್ರ ಮಂಗಳವಾರ ಸುದೀರ್ಘ ಅನಾರೋಗ್ಯದ ಬಳಿಕ ಕೊನೆಯುಸಿರೆಳೆದರು ಎಂದು ಅವರ ಪುತ್ರ ರೊರಾವರ್ ಕಾಲ್ರ ತಿಳಿಸಿದ್ದಾರೆ.

ತನ್ನ ಜೀವನದ ನಲ್ವತ್ತು ದಶಕಗಳನ್ನು ಭಾರತೀಯ ಆಹಾರಕ್ಕೆ ಮುಡಿಪಾಗಿಟ್ಟ ಜಿಗ್ಸ್ ಕಾಲ್ರ ಅವರನ್ನು ಭಾರತೀಯ ಪಾಕಶಾಸ್ತ್ರದ ಚಕ್ರವರ್ತಿ ಮತ್ತು ರಾಷ್ಟ್ರಕ್ಕೆ ರುಚಿ ಬಡಿಸಿದವರು ಎಂದೇ ವ್ಯಾಖ್ಯಾನಿಸಲಾಗುತ್ತದೆ. ಇತಿಹಾಸದಲ್ಲಿ ಕಳೆದುಹೋದ ತಿನಿಸುಗಳನ್ನು ಮತ್ತು ಗಲೌಟಿ ಕಬಾಬ್‌ನಂತಹ ಶತಮಾನದಷ್ಟು ಹಳೆಯ ಖಾದ್ಯಗಳನ್ನು ಪುನರ್‌ಪರಿಚಯಿಸಿದ ಹೆಗ್ಗಳಿಕೆ ಹೊಂದಿರುವ ಕಾಲ್ರ ಅವರು ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಭಾರತೀಯ ಆಹಾರವನ್ನು ಪರಿಚಯಿಸುವಲ್ಲಿ ಮತ್ತು ಪ್ರತಿನಿಧಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

ಅವರ ಅಂತ್ಯಕ್ರಿಯೆಯನ್ನು ದಿಲ್ಲಿಯ ಲೋಧಿ ರುದ್ರಭೂಮಿಯಲ್ಲಿ ಗುರುವಾರ ಬೆಳಿಗ್ಗೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ನಾನು ತಂದೆಯನ್ನು ಕಳೆದುಕೊಂಡಿದ್ದೇನೆ. ಆದರೆ ಭಾರತದ ಪಾಕಶಾಸ್ತ್ರ ತನ್ನ ಅತೀದೊಡ್ಡ ರಾಯಬಾರಿಯನ್ನು ಕಳೆದುಕೊಂಡಿದೆ. ಅವರ ನಿಧನದಿಂದ ಭಾರತದ ಪಾಕಶಾಸ್ತ್ರದೆಡಿಗನ ನಮ್ಮ ನಿರ್ಣಯ ಮತ್ತು ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ರೊರಾವರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News