ಚುನಾವಣಾ ಬಾಂಡ್‌ಗಳ ವಿವರಗಳನ್ನು ಇನ್ನೂ ಸಲ್ಲಿಸದ ಬಿಜೆಪಿ, ಕಾಂಗ್ರೆಸ್

Update: 2019-06-04 15:55 GMT

ಹೊಸದಿಲ್ಲಿ,ಜೂ.4: ಚುನಾವಣಾ ಬಾಂಡ್‌ಗಳ ಮೂಲಕ ತಾವು ಈವರೆಗೆ ಸ್ವೀಕರಿಸಿರುವ ದೇಣಿಗೆಗಳ ವಿವರಗಳನ್ನು ಇನ್ನೂ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಿರುವ ಪಕ್ಷಗಳಲ್ಲಿ ಬಿಜೆಪಿ,ಕಾಂಗ್ರೆಸ್ ಮತ್ತು ಡಿಎಂಕೆ ಸೇರಿವೆ.

ಸರ್ವೋಚ್ಚ ನ್ಯಾಯಾಲಯದ ಎ.12ರ ನಿರ್ದೇಶದಂತೆ ಈ ವಿವರಗಳನ್ನು ಸಲ್ಲಿಸಲು ಮೇ 30 ಅಂತಿಮ ದಿನಾಂಕವಾಗಿತ್ತು.

 ಸರ್ವೋಚ್ಚ ನ್ಯಾಯಾಲಯದ ನಿರ್ದೇಶಗಳನ್ನು ಪಾಲಿಸುವಂತೆ ಚುನಾವಣಾ ಆಯೋಗವು ಕಳೆದ ತಿಂಗಳು ಮಾನ್ಯತೆ ಹೊಂದಿರುವ ಎಲ್ಲ ಪಕ್ಷಗಳಿಗೆ ಲಿಖಿತ ಸೂಚನೆ ನೀಡಿತ್ತು.

ಈ ಯೋಜನೆಯಡಿ ಭಾರತೀಯ ಪ್ರಜೆಯಾಗಿರುವ ಯಾವುದೇ ವ್ಯಕ್ತಿ ಅಥವಾ ಭಾರತದಲ್ಲಿ ಸ್ಥಾಪನೆಯಾದ ಯಾವುದೇ ಸಂಸ್ಥೆ ಚುನಾವಣಾ ಬಾಂಡ್‌ ಗಳನ್ನು ಖರೀದಿಸಿ ತಮ್ಮಿಷ್ಟದ ರಾಜಕೀಯ ಪಕ್ಷಕ್ಕೆ ದೇಣಿಗೆಯನ್ನು ಸಲ್ಲಿಸಬಹುದು ಮತ್ತು ಪಕ್ಷಗಳು ಇವುಗಳನ್ನು ಬ್ಯಾಂಕುಗಳಲ್ಲಿ ನಗದೀಕರಿಸಿಕೊಳ್ಳಬಹುದು. ಹಿಂದಿನ ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಕನಿಷ್ಠ ಶೇ.1ರಷ್ಟು ಮತಗಳನ್ನು ಗಳಿಸಿರುವ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಗಳನ್ನು ಸ್ವೀಕರಿಸಲು ಅರ್ಹವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News