ಹಬ್ಬಕ್ಕೆ ಏನು ಬೇಕು ಎಂಬ ಪ್ರಶ್ನೆಗೆ ಈ ಸಿರಿಯನ್ ಮಕ್ಕಳ ಉತ್ತರ ಕೇಳಿ..

Update: 2019-06-05 06:00 GMT

ಈದ್ ಸಂದರ್ಭದಲ್ಲಿ ಇತರ ಅಂಶಗಳ ಜತೆಗೆ ಮಕ್ಕಳಿಗೆ ಉಡುಗೊರೆಗಳ ಸುರಿಮಳೆಯೇ ಹರಿಯುತ್ತದೆ. ಆದರೆ ಯುದ್ಧಪೀಡಿತ ಸಿರಿಯಾದ ಮಕ್ಕಳಿಗೆ ಮಾತ್ರ ಉಡುಗೊರೆ ಎಂದರೆ ಭಿನ್ನ.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಿದ ವಿಡಿಯೊವೊಂದರಲ್ಲಿ, ಈದ್ ಸಂದರ್ಭದಲ್ಲಿ ಯಾವ ಉಡುಗೊರೆ ಬಯಸುತ್ತೀರಿ ಎಂಬ ಪ್ರಶ್ನೆಯನ್ನು ಇಲ್ಲಿನ ಕೆಲ ಮಕ್ಕಳಿಗೆ ಕೇಳಲಾಗಿತ್ತು. ಅದಕ್ಕೆ ಅವರು ನೀಡಿದ ಉತ್ತರಗಳು ಎಂಟು ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ಭೀಕರ ಜನಾಂಗೀಯ ಕಲಹದ ಭಯಾನಕತೆಯನ್ನು ಬಿಂಬಿಸುತ್ತವೆ.
ಯುದ್ಧದಲ್ಲಿ ಮಡಿದ ತಂದೆ ಮರಳಬೇಕು ಎಂದು ಒಂದು ಮಗು ಉತ್ತರಿಸಿದ್ದರೆ, ಮತ್ತೊಬ್ಬ ಹುಡುಗ ನನ್ನ ಗ್ರಾಮಕ್ಕೆ ನಾನು ಮರಳಿ ಸುರಕ್ಷಿತವಾಗಿ ಬದುಕುವಂತಾಗಬೇಕು ಎಂದು ಉತ್ತರಿಸಿದ್ದಾನೆ. ಕೆಲವರು ಆಟಿಕೆ, ಹೊಸ ಬಟ್ಟೆಯಂಥ ಅಲ್ಪಸಂತೋಷದ ಉಡುಗೊರೆಗಳನ್ನು ಕೇಳಿದ್ದಾರೆ.
ಸಿರಿಯಾ ಕೇರ್ ಎಂಬ ಮಲೇಷ್ಯಾ ಮೂಲದ ಎನ್‍ಜಿಓ ಫೇಸ್‍ಬುಕ್‍ನಲ್ಲಿ ಈ ವಿಡಿಯೊ  ಪೋಸ್ಟ್ ಮಾಡಿದ್ದು, ಸಿರಿಯಾದಲ್ಲಿ ವಾಸವಿರುವ ಮಲೇಷ್ಯಾ ಮೂಲದ ಅಮೀರ್ ಫಕೀರ್ ಇದನ್ನು ಸಿದ್ಧಪಡಿಸಿದ್ದಾರೆ.
ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆಯ ಹೈಕಮಿಷನರ್ ಅವರ ಪ್ರಕಾರ ಯುದ್ಧಪೀಡಿತ ಸಿರಿಯಾದಲ್ಲಿ 25 ಲಕ್ಷ ಮಕ್ಕಳು ಸೇರಿದಂತೆ 62 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದ್ದು, ಬಹುತೇಕ ಮಂದಿ ಪುನರ್ವಸತಿ ಕೇಂದ್ರಗಳಲ್ಲಿ ಸೀಮಿತ ಸೌಲಭ್ಯದೊಂದಿಗೆ ಜೀವನ ನಡೆಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News