ನಮಾಝ್ ಮಾಡುವ ಮೂಲಕ ರಸ್ತೆಗೆ ತಡೆ ಒಡ್ಡುವವರ ವಿರುದ್ಧ ಕ್ರಮಕ್ಕೆ ಬಿಜೆಪಿ ಸಂಸದ ಆಗ್ರಹ
Update: 2019-06-05 16:42 IST
ಬುಲಂದ್‌ಶಹರ್, ಜೂ.5: ನಮಾಝ್ ಮಾಡುವ ಮೂಲಕ ರಸ್ತೆಗೆ ತಡೆ ಒಡ್ಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಆಗ್ರಹಿಸಿರುವ ಬಿಜೆಪಿಯ ಸಂಸದ ಭೋಲಾ ಸಿಂಗ್ ವಿವಾದ ಸೃಷ್ಟಿಸಿದ್ದಾರೆ.
‘‘ಯಾವುದೇ ಧರ್ಮದ ಹಬ್ಬದ ಆಚರಣೆಯಿಂದ ಇತರರಿಗೆ ತೊಂದರೆಯಾದರೆ ಅದನ್ನು ಮಾಡಬಾರದು. ಭಕ್ತಿಯನ್ನು ಪ್ರದರ್ಶಿಸಲು ಸ್ಥಳ ನಿಗದಿಪಡಿಸಿಕೊಳ್ಳಬೇಕು. ರಸ್ತೆಗಳಿಗೆ ಯಾವುದೇ ಕಾರಣಕ್ಕೂ ತಡೆಯೊಡ್ಡಬಾರದು. ಇದು ತಪ್ಪು. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ’’ಎಂದು ಎಎನ್‌ಐಗೆ ಸಿಂಗ್ ತಿಳಿಸಿದ್ದಾರೆ.
‘‘ನಾವು ಹಬ್ಬವನ್ನು ಆಚರಿಸುವ ವೇಳ ಅದು ಇನ್ನೊಬ್ಬರಿಗೆ ತೊಂದರೆಯಾಗುವ ರೀತಿ ಕಾಣಬಾರದು. ಹಿಂದೂಗಳು ಹೋಳಿ, ದೀಪಾವಳಿ, ರಕ್ಷಾ ಬಂಧನ್‌ನ್ನು ಇಡೀ ದೇಶದಲ್ಲಿ ಆಚರಿಸುತ್ತಾರೆ. ಆದರೆ, ನಮ್ಮ ಹಬ್ಬಗಳಿಂದ ಯಾರಿಗೂ ತೊಂದರೆಯಾದ ಅನುಭವ ಆಗಿಲ್ಲ’’ ಎಂದು ಸಿಂಗ್ ಹೇಳಿದ್ದಾರೆ.
ಬುಧವಾರ ದೇಶಾದ್ಯಂತ ಮುಸ್ಲಿಮರು ಈದುಲ್ ಫಿತ್ರ್ ಆಚರಿಸುತ್ತಿರುವ ವೇಳೆಯೇ ಸಿಂಗ್ ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.