ಈದುಲ್ ಫಿತ್ರ್ ನಮಾಝ್ ವೇಳೆ ಸನ್ಮಾನ

Update: 2019-06-05 11:38 GMT

ಕಾಪು, ಜೂ.5 : ಮಜೂರು - ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಈದುಲ್ ಫಿತುರ್ ನಮಾಜಿನ ಸಂದರ್ಭ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ಮಸೀದಿಯ ಒಳಗಿನ ಕಾರ್ಪೆಟ್ ಸಹಿತ ಅದರ ಎಲ್ಲಾ ಸಲಕರಣೆಗಳನ್ನು ಸೌದಿಯಿಂದ ಕಳುಹಿಸಿ ಸಹಕರಿಸಿದ ಇಸ್ಮಾಯಿಲ್ ಕುಚ್ಚಿಗುಡ್ಡೆ ಇವರನ್ನು ಮಸೀದಿಯ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.

ಮಸೀದಿಯ ಅಧ್ಯಕ್ಷ ಎಂ.ಎಚ್. ಅಬ್ದುಲ್ ಹಮೀದ್, ಧರ್ಮಗುರುಗಳಾದ ಅಬ್ದುರ್ರಶೀದ್ ಸಖಾಫಿ, ಫೈಝಲ್ ಹುಸೈನ್, ಎಂ.ಕೆ. ಇಬ್ರಾಹಿಂ, ಪಿ.ಎಂ. ಇಬ್ರಾಹಿಂ, ಅಬ್ದುಲ್ ಹಮೀದ್ ಮಲ್ಲಾರು, ನಜೀರ್ ಮಜೂರು, ಹಾಜಬ್ಬ ಕರಂದಾಡಿ, ಶಂಶುದ್ದೀನ್ ಕರಂದಾಡಿ, ಮಸ್ಜಿದ್‍ನ ಆಡಳಿತ ಸಮಿತಿಯ ಸದಸ್ಯ ಮಹಮ್ಮದ್ ರಝಾಕ್ ಚಂದ್ರನಗರ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News