ರೆಪೊ ದರ ಇಳಿಸಿದ ಆರ್‌ಬಿಐ: ಸಾಲಗಳ ಇಎಂಐ ಅಗ್ಗ ಸಾಧ್ಯತೆ
Update: 2019-06-06 12:23 IST
ಹೊಸದಿಲ್ಲಿ, ಜೂ.6: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಗುರುವಾರ ರೆಪೊ ದರವನ್ನು 25 ಬೆಸಿಸ್ ಪಾಯಿಂಟ್ಸ್‌ನಷ್ಟು ಇಳಿಸಿದೆ. ಹೀಗಾಗಿ ಶೇ. 6ರಷ್ಟಿದ್ದ ರೆಪೊ ದರ ಈಗ ಶೇ. 5.75ಕ್ಕೆ ಇಳಿದಿದೆ. ಇದೀಗ ಸತತ ಮೂರನೇ ಬಾರಿ ರೆಪೊ ದರ ಕಡಿತಗೊಳಿಸಲಾಗಿದೆ.
ಆರ್‌ಬಿಐ ಗವರ್ನರ್ ಶಶಿಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ(ಎಂಪಿಸಿ)ಸರ್ವ ಸಮ್ಮತದಿಂದ ರೆಪೊ ದರ ಕಡಿತಗೊಳಿಸಲು ನಿರ್ಧರಿಸಿದೆ. ಆರ್‌ಬಿಐನ ಈ ಹೆಜ್ಜೆಯಿಂದಾಗಿ ಗೃಹ, ವಾಹನ ಹಾಗೂ ಇನ್ನಿತರ ಸಾಲಗಳ ಇಎಂಐ ಸ್ವಲ್ಪ ಅಗ್ಗವಾಗುವ ಸಾಧ್ಯತೆಯಿದೆ.
ಈ ಹಿಂದೆ 2013ರಲ್ಲಿ ದಶಕಗಳಲ್ಲಿ ಮೊದಲ ಬಾರಿ ಆರ್ಥಿಕ ಪ್ರಗತಿ ಇಳಿಕೆಯಾದ ಸಂದರ್ಭದಲ್ಲಿ ಆರ್‌ಬಿಐ ತಕ್ಷಣವೇ ರೆಪೊ ದರವನ್ನು ಇಳಿಸಿತ್ತು. ಆರ್‌ಬಿಐ ಈ ವರ್ಷ ಎರಡು ಹಂತದಲ್ಲಿ ರೆಪೊ ದರ ಇಳಿಸಿದ್ದು, ಶೇ.6.5 ರಿಂದ 6ಕ್ಕೆ ಇಳಿಸಿತ್ತು.