×
Ad

ಇನ್ನೂ ಪತ್ತೆಯಾಗದ ವಾಯುಪಡೆ ವಿಮಾನ

Update: 2019-06-06 19:56 IST

ಇಟಾನಗರ, ಜೂ.6: ಸೋಮವಾರ ಮಧ್ಯಾಹ್ನದಿಂದ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿರುವ ಭಾರತೀಯ ವಾಯುಪಡೆಯ ಎಎನ್-32 ವಿಮಾನ ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ , ಅರುಣಾಚಲ ಪ್ರದೇಶದ ಮೋಲೊ ಗ್ರಾಮದ ಬೆಟ್ಟವೊಂದರಲ್ಲಿ ಗಾಢ ಕಪ್ಪು ಹೊಗೆ ಬರುತ್ತಿರುವುದನ್ನು ಸೋಮವಾರ ಕಂಡಿರುವುದಾಗಿ ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನದ ವೇಳೆ ಮೋಲೊ ಗ್ರಾಮದಿಂದ ಸುಮಾರು 8 ಕಿ.ಮೀ. ದೂರದ ಬೆಟ್ಟವೊಂದರಲ್ಲಿ ದಟ್ಟವಾದ ಕಪ್ಪು ಹೊಗೆ ಹೊರಬರುತ್ತಿರುವುದನ್ನು ಕಂಡಿರುವುದಾಗಿ ತುಂಬಿನ್ ಗ್ರಾಮದ ಮೂವರು ವ್ಯಕ್ತಿಗಳು ಹೇಳಿದ್ದಾರೆ. ಇವರ ಹೇಳಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಪೇಮಾ ಖಂಡು ಹೇಳಿದ್ದಾರೆ.

 ಮೂರು ರಕ್ಷಣಾ ತಂಡಗಳು ನಾಪತ್ತೆಯಾದ ವಿಮಾನವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿವೆ. ಜೊತೆಗೆ, ಪೊಲೀಸರು, ಸೇನಾ ಪಡೆ ಹಾಗೂ ವಾಯುಪಡೆಯ ತಂಡಗಳೂ ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ವಿಮಾನದ ಪತ್ತೆ ಕಾರ್ಯದಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News