ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ: ರವಿರಾಜ್ ನಾರಾಯಣ್

Update: 2019-06-06 15:26 GMT

ಹೆಬ್ರಿ, ಜೂ.6:ಅರಣ್ಯಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಈ ಮೂಲಕ ಪರಿಸರದ ರಕ್ಷಣೆಯನ್ನು ಮಾಡಿ, ವಾಯು ಮಾಲಿನ್ಯವನ್ನು ತಡೆಗಟ್ಟಬೇಕು ಎಂದು ಉಡುಪಿ ಜಿಲ್ಲಾ ವನ್ಯಜೀವಿ ಪರಿಪಾಲಕ ರವಿರಾಜ್ ನಾರಾಯಣ್ ಹೇಳಿದ್ದಾರೆ.

ಬುಧವಾರ ಹೆಬ್ರಿ ಸಮೀಪದ ಜೋಮ್ಲುತೀರ್ಥದಲ್ಲಿ ಅರಣ್ಯ ಇಲಾಖೆಯ ಸೋಮೇಶ್ವರ ವನ್ಯಜೀವಿ ವಿಭಾಗದ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.

ಈ ಸಂದರ್ಭದಲ್ಲಿ ಪ್ರವಾಸಿ ತಾಣವಾದ ಜೋಮ್ಲುತೀರ್ಥದ ಆಸುಪಾಸಿನಲ್ಲಿ ಗಿಡ ನೆಡುವ ಹಾಗೂ ಪರಿಸರದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಘುರಾಮ ನಾಯಕ್, ಚಾರ ವಿವೇಕಾನಂದ ವೇದಿಕೆಯ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ, ನಿವೃತ್ತ ಉಪನ್ಯಾಸಕ ಸಿ.ಆನಂದ ಹೆಗ್ಡೆ, ಚಾರ ಗ್ರಾಮ ಪಂಚಾಯಿತ್ ಉಪಾಧ್ಯಕ್ಷೆ ರೇಷ್ಮಾ, ಅರಣ್ಯ ಇಲಾಖೆಯ ಸೋಮೇಶ್ವರ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ವಾನಿ ಎಂ.ಹೆಗಡೆ, ಉಪ ವಲಯ ಅರಣ್ಯಾಧಿಕಾರಿ ಮಲ್ಲಯ್ಯ, ಅಧಿಕಾರಿ ಗಳಾದ ವೀರೇಶ್, ಶಿವಾನಂದ್ ಹಾಗೂ ಸಿಬ್ಬಂದಿ ವರ್ಗದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News