ಮಂಗಳೂರು: ವಿಶ್ವ ಚಿತ್ತ ವಿಕಲತೆ ದಿನಾಚರಣೆ

Update: 2019-06-06 16:12 GMT

ಮಂಗಳೂರು, ಜೂ.6: ಯಾವೊಬ್ಬ ಮನುಷ್ಯನೂ ಪರಿಪೂರ್ಣನಲ್ಲ. ಪ್ರತಿಯೊಬ್ಬರಲ್ಲೂ ಒಂದಾದರೂ ನ್ಯೂನ್ಯತೆ ಕಂಡುಬರುತ್ತದೆ. ಅದನ್ನು ಅರಿತು ಬದುಕುವುದೇ ಜೀವನ ಎಂದು ಮಿಲಾಗ್ರಿಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾ. ಮೈಖಲ್ ಸಾಂತುಮೇಯರ್ ಹೇಳಿದರು.

ನಗರದ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಆಡಿಟೋರಿಯಂನಲ್ಲಿ ಗುರುವಾರ ನಡೆದ ‘ವಿಶ್ವ ಚಿತ್ತವಿಕಲತೆ ದಿನ-2019’ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವನ ಮನಸ್ಸಿನ ಒತ್ತಡದಿಂದ ಉಂಟಾಗುವ ಭಯ ಅಥವಾ ಚಿಂತನೆಯೇ ಮಾನಸಿಕ ರೋಗವಾಗಿದೆ. ಇದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇದೆ. ಮಾನಸಿಕ ಸ್ಥಿರತೆ ಒಂದೇ ರೀತಿ ಇರುವುದಿಲ್ಲ. ಕೆಲವರಲ್ಲಿ ಕೆಲಸದ ಒತ್ತಡವಿದ್ದರೆ ಇನ್ನೂ ಕೆಲವರಿಗೆ ವೈಯಕ್ತಿಕ ಕಾರಣಗಳಿಂದ ಮಾನಸಿಕ ಸ್ಥಿರತೆಯನ್ನು ಸಮಾತೊಲನದಲ್ಲಿಡಲು ಸಾಧ್ಯವಿರುವುದಿಲ್ಲ ಈಗ ಇರುವಂತಹ ಪೈಪೋಟಿ ಜೀವನದಲ್ಲಿ ಮನುಷ್ಯರು ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಾರೆ ಎಂದು ಫಾ. ಮೈಖಲ್ ಸಾಂತುಮೇಯರ್ ಅಭಿಪ್ರಾಯಪಟ್ಟರು
 

ಮಾನವನಿಗೆ ಎಂತಹ ಸಂದರ್ಭದಲ್ಲೂ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ದೈಹಿಕ, ಮಾನಸಿಕ ಅಥವಾ ಸಾಮಾಜಿಕ ಸವಾಲುಗಳನ್ನು ಎದುರಿಸುವ ಹಾಗೂ ಸ್ವಯಂ ನಿರ್ಧಾರ ಮಾಡುವಂತಹ ಸಾಮರ್ಥ್ಯವಿದೆ. ಚಿತ್ತವಿಕಲತೆ ಶಾಶ್ವತವಲ್ಲ. ಮಾನಸಿಕ ಖಿನ್ನತೆಗೆ ಒಳಗಾದವರನ್ನು ಸಮಾಜದಿಂದ ದೂರವಿಡದೆ ನಮ್ಮವರಲ್ಲಿ ಒಬ್ಬರಂತೆ ನೋಡಬೇಕು ಹಾಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕುವಂತೆ ಮಾಡಿದಾಗ ಗುಣಮುಖರಾಗುತ್ತಾರೆ ಎಂದು ಫಾ. ಮೈಖಲ್ ಸಾಂತುಮೇಯರ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಡಾ ರಾಮಕೃಷ್ಣ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮನೋರೋಗ ತಜ್ಞ ಡಾ. ಅನಿರುದ್ಧ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News