ನೀಟ್‍ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಕ್ಸಲೆಂಟ್ ಮೂಡಬಿದಿರೆಯ ವಿದ್ಯಾರ್ಥಿಗಳು

Update: 2019-06-06 17:04 GMT

ಮೂಡುಬಿದಿರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ, ವೈದ್ಯಕೀಯ ಕೋರ್ಸುಗಳಿಗೆ ನಡೆದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ತಯಾರಿ ನಡೆಸಿದ 55 ವಿದ್ಯಾರ್ಥಿಗಳಲ್ಲಿ  ಇಬ್ಬರು 600ಕ್ಕಿಂತ ಹೆಚ್ಚು (ಸಂತೋಷ ರೆಡ್ಡಿ -625, ಶ್ಲೋಕಶ್ರೀ-602) ಅಂಕಗಳಿಸಿದ್ದಾರೆ.

12 ವಿದ್ಯಾರ್ಥಿಗಳು (ಸುದೀಪ್ ಜಾವಳ್ಳಿ -587, ರೆನೋ-566, ಸಿರಿ-534, ಗಣೇಶ ಗೌಡ-528, ಸಾಗರ್ ಜಿ-535 ಇತ್ಯಾದಿ) 500 ಕ್ಕಿಂತ ಹೆಚ್ಚು ಅಂಕಗಳಿಸಿದ್ದಾರೆ.

ಬೇರೆ ಬೇರೆ ವಿದ್ಯಾಸಂಸ್ಥೆಗಳಲ್ಲಿ ದ್ವಿತಿಯ ಪಿಯುಸಿ ಮುಗಿಸಿ ಬಂದಂತಹ 33 ವಿದ್ಯಾರ್ಥಿಗಳಿದ್ದ ನೀಟ್ ಪುನರಾವರ್ತಿತ ವಿದ್ಯಾರ್ಥಿಗಳ ಬ್ಯಾಚ್‍ನಲ್ಲಿ- 6 ವಿದ್ಯಾರ್ಥಿಗಳು 500 ಕ್ಕಿಂತಲೂ ಹೆಚ್ಚಿನ ಅಂಕವನ್ನು ಗಳಿಸಿದ್ದಾರೆ. ಹಾಗೆಯೇ- 25 ವಿದ್ಯಾರ್ಥಿಗಳು  400ಕ್ಕಿಂತ ಹೆಚ್ಚು ಅಂಕ ಗಳಿಸಿರುತ್ತಾರೆ.

ಹತ್ತನೆ ತರಗತಿಯಲ್ಲಿ 70% ರಿಂದ 80% ಅಂಕಗಳಿಸಿ, ದ್ವಿತಿಯ ಪದವಿಪೂರ್ವ ಪರೀಕ್ಷೆಯಲ್ಲಿ ಶೇ 90 ರಿಂದ 95 ಅಂಕ ಗಳಿಸಿ, ಮೊದಲ ಪ್ರಯತ್ನದಲ್ಲಿ ನೀಟ್ ಪರೀಕ್ಷೆಯಲ್ಲಿ ಅತಿ ಕಡಿಮೆ ಅಂಕ ಪಡೆದು ವೈದ್ಯಕೀಯ ಶಿಕ್ಷಣದಿಂದ ವಂಚಿತರಾದವರು ಹತಾಶರಾಗದೆ, ಎಕ್ಸಲೆಂಟ್ ವಿದ್ಯಾಸಂಸ್ಥೆ ಸೇರಿ ಸಾಧನೆ ಗೈದು ಸರಕಾರಿ ಕೋಟದಡಿ ವೈದ್ಯಕೀಯ ವಿದ್ಯಾಭ್ಯಾಸ  ಮುಂದುವರೆಸಲು ಅವಕಾಶ ಪಡೆದಿರುತ್ತಾರೆ. ಆ ವಿದ್ಯಾರ್ಥಿಗನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಯುವರಾಜ್‍ಜೈನ್ ಅವರು ಅಭಿನಂದಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಪರಿಶ್ರಮಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್‍ಕುಮಾರ್ ಶೆಟ್ಟಿ, ನೀಟ್ ಸಂಯೋಜಕರಾದ ಡಾ. ಪ್ರಶಾಂತ್ ಹೆಗಡೆ, ರಸಾಯನ ಶಾಸ್ತ್ರ ಅಧ್ಯಾಪಕರಾದ ಪ್ರೊ.ದಯಾನಂದ್, ಭೌತ ಶಾಸ್ತ್ರ ಅಧ್ಯಾಪಕರಾದ ಪ್ರೊ. ರಾಮಮೂರ್ತಿ ಅವರನ್ನೂ ಅಧ್ಯಕ್ಷರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News