×
Ad

ಸಂಬಳ ವಿವಾದ:ಯಮುನೋತ್ರಿ ದೇವಳದ ಕಾಣಿಕೆ ಡಬ್ಬಿಗೆ ಬಟ್ಟೆ ಮುಚ್ಚಿದ ಅರ್ಚಕರು

Update: 2019-06-07 19:09 IST

ಉತ್ತರಕಾಶಿ(ಉತ್ತರಾಖಂಡ),ಜೂ.7: ಭಕ್ತರು ಸಲ್ಲಿಸುವ ಕಾಣಿಕೆಗಳ ಲಾಭವೆತ್ತಲು ಇಲ್ಲಿಯ ಪ್ರಸಿದ್ಧ ಯಮುನೋತ್ರಿ ದೇವಸ್ಥಾನ ಅರ್ಚಕರು ಕಾಣಿಕೆ ಡಬ್ಬಿಗಳನ್ನು ಬಟ್ಟೆಯಿಂದ ಮುಚ್ಚಿದ್ದಾರೆ. ಡಬ್ಬಿಗಳಲ್ಲಿ ಹಾಕಲಾಗುವ ಕಾಣಿಕೆಗಳಿಂದ ತಮಗೆ ಯಾವುದೇ ಸಂಬಳ ದೊರೆಯುತ್ತಿಲ್ಲ ಮತ್ತು ತಾವು ಅನಿವಾರ್ಯವಾಗಿ ಅವುಗಳನ್ನು ಬಟ್ಟೆಯಿಂದ ಮುಚ್ಚುವಂತಾಗಿದೆ ಎಂದು ಅರ್ಚಕರು ಹೇಳಿದ್ದಾರೆ.

‘‘ಕಾಣಿಕೆಯ ಶೇಕಡಾವಾರು ಲೆಕ್ಕದಲ್ಲಿ ನಮಗೆ ಸಂಬಳ ದೊರೆಯುತ್ತಿದ್ದರೆ ನಾವು ಅವುಗಳಿಗೆ ಬಟ್ಟೆಯನ್ನು ಹೊದಿಸುತ್ತಿರಲಿಲ್ಲ. ಕಾಣಿಕೆಯ ಶೇ.1ರಷ್ಟು ಭಾಗವೂ ನಮಗೆ ದೊರೆಯುತ್ತಿಲ್ಲ,ಹೀಗಾಗಿ ಕಾಣಿಕೆ ಡಬ್ಬಿಗಳಿಗೆ ಬಟ್ಟೆಯನ್ನು ಹೊದಿಸಿದ್ದೇವೆ ’’ ಎಂದು ಅರ್ಚಕರೋರ್ವರು ತಿಳಿಸಿದರು.

ಕಾಣಿಕೆ ಡಬ್ಬಿಗಳಿಗೆ ಬಟ್ಟೆಗಳನ್ನು ಹೊದಿಸಿರುವ ಮಾಹಿತಿ ಲಭಿಸಿದೆ. ದೇವಸ್ಥಾನದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅರ್ಚಕರ ವಿರುದ್ಧ ಎಫ್‌ಐಆರ್ ದಾಖಲಿಸಿ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಅನುರಾಗ ಆರ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News