ಫ್ರೆಂಚ್ ಓಪನ್: 12ನೇ ಬಾರಿ ನಡಾಲ್ ಫೈನಲ್‌ಗೆ
Update: 2019-06-07 21:53 IST
ಪ್ಯಾರಿಸ್, ಜೂ.7: ಹಾಲಿ ಚಾಂಪಿಯನ್ ರಫೆಲ್ ನಡಾಲ್ ಸ್ವಿಸ್ ಆಟಗಾರ ರೋಜರ್ ಫೆಡರರ್‌ರನ್ನು ಮಣಿಸಿ 12ನೇ ಬಾರಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಫೈನಲ್‌ಗೆ ತಲುಪಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 33ರ ಹರೆಯದ ನಡಾಲ್ 6-3, 6-4, 6-2 ಸೆಟ್‌ಗಳ ಅಂತರದಿಂದ ಫೆಡರರ್‌ಗೆ ಸೋಲುಣಿಸಿದರು. 12ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲಲು ಇನ್ನೊಂದೇ ಮೆಟ್ಟಿಲು ಏರಬೇಕಾಗಿರುವ ನಡಾಲ್ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅಥವಾ ಆಸ್ಟ್ರೀಯದ 4ನೇ ಶ್ರೇಯಾಂಕದ ಡೊಮಿನಿಕ್ ಥೀಮ್‌ರನ್ನು ಎದುರಿಸಲಿದ್ದಾರೆ.
ನಡಾಲ್ ಟೂರ್ನಿಯಲ್ಲಿ 12ನೇ ಬಾರಿ ಆಡುತ್ತಿದ್ದು ಈ ತನಕ ಸೋಲುಂಡಿಲ್ಲ. ಮತ್ತೊಂದೆಡೆ, ಫೆಡರರ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 11 ವರ್ಷಗಳ ಬಳಿಕ ಹೀನಾಯ ಸೋಲನುಭವಿಸಿದರು.