ವಿವಿಗಳಲ್ಲಿ ಖಾಲಿಯಿರುವ ಬೋಧಕರ ಹುದ್ದೆಗಳಿಗೆ ನೇಮಕಕ್ಕೆ ಆರು ತಿಂಗಳ ಗಡುವು ನೀಡಿದ ಯುಜಿಸಿ

Update: 2019-06-07 16:31 GMT

ಹೊಸದಿಲ್ಲಿ,ಜೂ.7: ಖಾಲಿಯಿರುವ ಬೋಧಕರ ಹುದ್ದೆಗಳನ್ನು ಆರು ತಿಂಗಳಲ್ಲಿ ಭರ್ತಿ ಮಾಡುವಂತೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ)ವು ಎಲ್ಲ ವಿವಿಗಳಿಗೆ ಸೂಚಿಸಿದೆ.

ಯುಜಿಸಿಯು ಜೂ.4ರಂದು ಹೊರಡಿಸಿರುವ ‘‘ವಿವಿಗಳು,ಕಾಲೇಜುಗಳು ಮತ್ತು ಡೀಮ್ಡ್ ವಿವಿಗಳಲ್ಲಿ ಬೋಧಕರ ನೇಮಕಾತಿಗಾಗಿ ಮಾರ್ಗದರ್ಶಿ ಸೂತ್ರ’’ ಗಳಲ್ಲಿ ಬೋಧಕರ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸುವಂತೆ ಮತ್ತು ಆರು ತಿಂಗಳಲ್ಲಿ ಅದನ್ನು ಪೂರ್ಣಗೊಳಿಸುವಂತೆ ವಿವಿಗಳಿಗೆ ಸೂಚಿಸಲಾಗಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಬೋಧಕ ವೃಂದದ ಕೊರತೆಯು ಇಂದು ದೇಶದಲ್ಲಿಯ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳಲ್ಲೊಂದಾಗಿದೆ. ಹೀಗಾಗಿ ಈ ಮಾರ್ಗಸೂಚಿಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಯುಜಿಸಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News