ಸಂಪುಟ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸೇವಾವಧಿ ವಿಸ್ತರಣೆ

Update: 2019-06-07 17:56 GMT

ಹೊಸದಿಲ್ಲಿ, ಜೂ.7: ಸಂಪುಟ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹಾರ ಸೇವಾವಧಿಯನ್ನು ಮತ್ತೆ ಮೂರು ತಿಂಗಳಿಗೆ ವಿಸ್ತರಿಸಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶ ಪತ್ರದಲ್ಲಿ ತಿಳಿಸಲಾಗಿದೆ. 2015ರ ಮೇ ತಿಂಗಳಿನಲ್ಲಿ ಸಿನ್ಹಾರನ್ನು ಎರಡು ವರ್ಷದ ಅವಧಿಗಾಗಿ ಸಂಪುಟ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಪ್ರಧಾನಿ ಮೋದಿ ನೇತೃತ್ವದ ನೇಮಕಾತಿ ಸಮಿತಿಯು ಬಳಿಕ 2017 ಮತ್ತು 2018ರಲ್ಲಿ ಸಿನ್ಹಾರ ನೇಮಕಾತಿಯನ್ನು ಒಂದೊಂದು ವರ್ಷ ವಿಸ್ತರಿಸಿತ್ತು. ಇದೀಗ ಮೂರನೇ ಬಾರಿಗೆ ವಿಸ್ತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News