ಮಹಿಳೆಯರಿಗೆ ಉಚಿತ ಮೆಟ್ರೊ, ಬಸ್ ಪ್ರಯಾಣ: ಇದುವರೆಗೆ ಪ್ರಸ್ತಾಪ ಕಳುಹಿಸದ ದಿಲ್ಲಿ ಸರಕಾರ; ಕೇಂದ್ರ

Update: 2019-06-07 18:06 GMT

ಹೊಸದಿಲ್ಲಿ, ಜೂ. 7: ಮೆಟ್ರೊ ರೈಲುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರವಾಸದ ಬಗ್ಗೆ ಸಚಿವಾಲಯ ಆಗಲಿ, ದಿಲ್ಲಿ ಮೆಟ್ರೊ ರೈಲು ಕಾರ್ಪೊರೇಶನ್ ಆಗಲಿ ಇದುವರೆಗೆ ದಿಲ್ಲಿ ಸರಕಾರದಿಂದ ಯಾವುದೇ ಪ್ರಸ್ತಾಪ ಸ್ವೀಕರಿಸಿಲ್ಲ ಎಂದು ಕೇಂದ್ರದ ಸಹಾಯಕ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

 ದಿಲ್ಲಿ ಸಾರಿಗೆ ನಿಗಮದ ಬಸ್‌ಗಳು ಹಾಗೂ ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದಾಗಿ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸೋಮವಾರ ಘೋಷಿಸಿದ್ದರು. ಬಸ್ಸುಗಳಲ್ಲಿ ಯಾರಿಗಾದರೂ ಟಿಕೆಟು ರಹಿತ ಪ್ರಯಾಣ ಅಥವಾ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದಾದರೆ, ಮೊದಲು ನಮ್ಮಲ್ಲಿ ಬಸ್ ಇರಬೇಕು. ಅನಂತರ ನಮ್ಮಲ್ಲಿ 11 ಸಾವಿರ ಬಸ್‌ಗಳನ್ನು ಮಂಜೂರು ಮಾಡಲು ಸಾಧ್ಯವಿದೆಯೇ ? ಈಗ ಎಷ್ಟು ಬಸ್‌ಗಳು ಇವೆ ? ಎಂದು ಪ್ರಶ್ನಿಸಿಕೊಳ್ಳಬೇಕು ಎಂದು ಪುರಿ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ಸ್ವಚ್ಛ ಸರ್ವೇಕ್ಷಣಾ ಲೀಗ್ 2020 ಅನ್ನು ಲೋಕಾರ್ಪಣೆಗೊಳಿಸಿದ ಬಳಿಕ ಪುರಿ ಈ ಹೇಳಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News