ಇಂಫಾಲ: ಮಾದಕ ವಸ್ತು ಸಾಗಾಟಗಾರನೆಂದು ಶಂಕಿಸಿ ವ್ಯಕ್ತಿಯ ಥಳಿಸಿ ಹತ್ಯೆ

Update: 2019-06-08 17:23 GMT

ಇಂಫಾಲ್, ಜೂ. 8: ಮಾದಕ ವಸ್ತು ಸಾಗಾಟಗಾರನೆಂದು ಶಂಕಿಸಿ ವ್ಯಕ್ತಿಯೋರ್ವನನ್ನು ಇಲ್ಲಿನ ಮಾದಕ ವಸ್ತು ವಿರೋಧಿ ಜಂಟಿ ಸಮಿತಿ ಸದಸ್ಯರು ಥಳಿಸಿ ಹತ್ಯೆಗೈದ ಘಟನೆ ಮಣಿಪುರದ ಇಂಫಾಲ ಜಿಲ್ಲೆಯಲ್ಲಿ ಸಂಭವಿಸಿದೆ.

ಇಂಫಾಲದ ಮಾದಕ ವಸ್ತು ವಿರೋಧಿ ಜಂಟಿ ಸಮಿತಿಯ ಸದಸ್ಯರು ಮುಹಮ್ಮದ್ ಹಲೀಮ್ ಅವರನ್ನು ಮಾದಕ ವಸ್ತು ಸಾಗಾಟಗಾರನೆಂದು ಶಂಕಿಸಿ ಅವರ ಮನೆಯಿಂದ ಕರೆದೊಯ್ದು ಥಳಿಸಿ ಹತ್ಯೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ನಡೆಸುತ್ತಿರುವ ಸಂದರ್ಭ ಹಲೀಮ್ ಅವರಿಗೆ ಥಳಿಸಲಾಗಿದೆ. ಇದರಿಂದ ಅವರು ಮೃತಪಟ್ಟಿದ್ದಾರೆ. ಈ ಸಂದರ್ಭ ನಡೆದ ಹಿಂಸಾಚಾರದಲ್ಲಿ ಪತ್ರಕರ್ತ ಹಾಗೂ ಅವರ ಸಹವರ್ತಿ ಮೇಲೆ ಕೂಡ ಹಲ್ಲೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

 ಹಲೀಮ್ ಅವರು ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಉದ್ರಿಕ್ತ ಜನರು ಇಲ್ಲಿಗೆ ಆಗಮಿಸಿದರು. ಅಲ್ಲದೆ, ಮಾದಕ ವಸ್ತು ವಿರೋಧಿ ಜಂಟಿ ಸಮಿತಿಯ ಕಚೇರಿ ಹಾಗೂ ಸಮಿತಿಯ ಅಧ್ಯಕ್ಷ ಮುಹಮ್ಮದ್ ಅಜಿಮುದ್ದೀನ್ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News