ಅತ್ಯಾಚಾರ ಆರೋಪ: ವ್ಯಕ್ತಿಯನ್ನು ಬಿಡುಗಡೆಗೊಳಿಸಿದ ಹೈಕೋರ್ಟ್

Update: 2019-06-08 17:34 GMT

ಹೊಸದಿಲ್ಲಿ, ಜೂ. 8: ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೋರ್ವನನ್ನು ಬಿಡುಗಡೆ ಮಾಡಿ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ದಿಲ್ಲಿ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ.

ಮಹಿಳೆಯ ಸಾಕ್ಷ್ಯ ನಂಬಲರ್ಹವಲ್ಲ. ಸಂಪೂರ್ಣವಾಗಿ ವಿರೋಧಾಬಾಸವಾಗಿದೆ. ಅತ್ಯಾಚಾರ ನಡೆದ ದಿನಾಂಕ ಹಾಗೂ ದೂರು ದಾಖಲಿಸಿದ ದಿನಾಂಕದ ನಡುವೆ ಮಹಿಳೆ 529 ಬಾರಿ ಆರೋಪಿಗೆ ಕರೆ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಮನಮೋಹನ್ ಹಾಗೂ ಸಂಗೀತಾ ದಿಂಗ್ರಾ ಸೆಹಗಲ್ ಅವರನ್ನು ಒಳಗೊಂಡ ಪೀಠ, ಮಹಿಳೆಯ ಸಾಕ್ಷ ವಿಶ್ವಾಸಾರ್ಹವಲ್ಲ ಹಾಗೂ ಭರವಸೆ ಉತ್ತೇಜಿಸುತ್ತಿಲ್ಲ ಎಂದು ಹೇಳಿದೆ ಹಾಗೂ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮಹಿಳೆ ಸಲ್ಲಿಸಿದ ಮನವಿಯನ್ನು ತಿರಸ್ಕರಿದೆ.

ವಿಚಾರಣಾ ನ್ಯಾಯಾಲಯ ವ್ಯಕ್ತಿಯನ್ನು ಜೂನ್ 5ರಂದು ಬಿಡುಗಡೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News