ಶಾಸಕ ವೇದವ್ಯಾಸ ಕಾಮತ್ ರಿಂದ ರಾಜಕಾಲುವೆಗಳ ಪರಿಶೀಲನೆ

Update: 2019-06-09 08:05 GMT

ಮಂಗಳೂರು: ಮಳೆಗಾಲದಲ್ಲಿ ಮಳೆಯ ನೀರು ಸರಾಗವಾಗಿ ಹರಿಯುವ ಉದ್ದೇಶದಿಂದ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಸೂಚನೆಯಂತೆ ರಾಜ ಕಾಲುವೆ ಹಾಗೂ ಬೃಹತ್ ಚರಂಡಿಗಳ ಮತ್ತು ಒಂದು ಮೀಟರ್ ಅಗಲದ ಚರಂಡಿಗಳ ಹೂಳೆತ್ತುವ ಕಾರ್ಯ ನಡೆದಿತ್ತು. ಆದರೆ ಅನೇಕ ಕಡೆ ಅಧಿಕಾರಿಗಳ ಬೇಜವಾಬ್ದಾರಿಗಳ ಪರಿಣಾಮ ಹೂಳೆತ್ತುವ ಕಾರ್ಯ ವಿಳಂಬಗತಿಯಲ್ಲಿ ನಡೆಯುತ್ತಿದೆ ಎನ್ನುವ ದೂರು ಬಂದ ಕಾರಣ ಶಾಸಕ ವೇದವ್ಯಾಸ ಕಾಮತ್ ಮಣ್ಣಗುಡ್ಡೆ  ಸಹಿತ ಪರಿಸರದ ಅನೇಕ ಬೃಹತ್ ಚರಂಡಿಗಳ ಮತ್ತು ರಾಜಕಾಲುವೆಗಳನ್ನು  ಸ್ಥಳೀಯರೊಂದಿಗೆ ಸೇರಿ ಪರಿಶೀಲಿಸಿದರು.

ಬಿಜೆಪಿ ಮುಖಂಡರಾದ ರಮೇಶ್ ಕಂಡೆಟ್ಟು, ಜಗದೀಶ್ ಶೆಟ್ಟಿ, ಮೋಹನ್ ಆಚಾರ್, ವಸಂತ್ ಶೇಟ್, ರಾಜೇಂದ್ರ ಕುಮಾರ್, ಮಹೇಶ್ ಕುಂದರ್, ವಸಂತ್ ಜೆ ಪೂಜಾರಿ, ಚರಿತ್ ಪೂಜಾರಿ, ಅಜಯ್ ಕುಡುಪು, ರೂಪೇಶ್ ಶೇಟ್, ಗುರುಚರಣ್ ಎಚ್.ಆರ್, ಗೋಕುಲ್ ದಾಸ್ ಭಟ್, ರಘುನಾಥ್ ಪ್ರಭು, ಸುಬ್ರಹ್ಮಣ್ಯ ಕಾಮತ್, ಅನಂತ್ ಕೃಷ್ಣ ಕಾಮತ್, ಶ್ರೀ ರಾಮ್ ಪೈ, ಹರೀಶ್ ಬೋಳೂರು, ಹರ್ಷಾದ್ ಪೋಪಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News