49 ವರ್ಷಗಳ ಬಳಿಕ ಕೇರಳದ ಮಹಿಳೆಯನ್ನು ಭೇಟಿಯಾಗಿ ಅಪ್ಪಿಕೊಂಡ ರಾಹುಲ್: ಈಕೆ ಯಾರು ಗೊತ್ತಾ?

Update: 2019-06-09 10:38 GMT

ವಯನಾಡ್, ಜೂ.9: ಅದು ಸುಮಾರು 49 ವರ್ಷಗಳ ಬಳಿಕ ಅಪೂರ್ವ ಸಮ್ಮಿಲನ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 1970ರಲ್ಲಿ ಹುಟ್ಟಿದಾಗ ದೆಹಲಿ ಆಸ್ಪತ್ರೆಯಲ್ಲಿ ಹೆರಿಗೆ ನರ್ಸ್ ಆಗಿ ಕಾರ್ಯನಿರ್ವಹಿಸಿದ್ದ ರಾಜಮ್ಮ ಅವರನ್ನು ರಾಹುಲ್ ಗಾಂಧಿ ಭೇಟಿಯಾಗಿ ಆಲಂಗಿಸಿದರು.

"ನಿಮ್ಮನ್ನು ಮೊದಲು ಎತ್ತಿಕೊಂಡು ಮುದ್ದಾಡಿದ್ದು ರಾಜೀವ್‍ ಗಾಂಧಿಯೂ ಅಲ್ಲ; ಸೋನಿಯಾಗಾಂಧಿಯೂ ಅಲ್ಲ. ನಾನು" ಎಂದು ರಾಜಮ್ಮ ಹೇಳಿಕೊಂಡಾಗ ರಾಹುಲ್ ಗಾಂಧಿ ಮತ್ತೆ ಅವರನ್ನು ಆಲಂಗಿಸಿಕೊಂಡರು.

ವಯನಾಡ್‍ನಲ್ಲಿ ಶನಿವಾರ ರಾತ್ರಿ ತಂಗಿದ್ದ ರಾಹುಲ್ ಅವರನ್ನು ರವಿವಾರ ಮುಂಜಾನೆ ಭೇಟಿ ಮಾಡಿದರು. ಈ ಅಪೂರ್ವ ಕ್ಷಣ ಸೆರೆಹಿಡಿದ ಚಿತ್ರವನ್ನು ರಾಜ್ಯದ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಲ ಫೇಸ್‍ಬುಕ್‍ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೂರನೇ ದಿನ ರಾಹುಲ್ ಗಾಂಧಿ ಕ್ಷೇತ್ರದಲ್ಲಿ ಕೈಗೊಂಡ ರೋಡ್‍ ಶೋಗಳಲ್ಲಿ ಚೆನ್ನಿತಲ ರಾಹುಲ್ ಅವರ ಜತೆಗಿದ್ದರು.

ರಾಹುಲ್ ಹುಟ್ಟಿದ ದೆಹಲಿಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ರಾಜಮ್ಮ ನರ್ಸ್ ಆಗಿದ್ದರು ಎಂದು ಫೇಸ್‍ಬುಕ್ ಪೋಸ್ಟ್ ‍ನಲ್ಲಿ ಹೇಳಲಾಗಿದೆ. ನಿವೃತ್ತಿಯ ಬಳಿಕ ಅವರು ರಾಹುಲ್‍ಗಾಂಧಿ ಕ್ಷೇತ್ರದಲ್ಲಿ ನೆಲೆಸಿದ್ದರು. ಹಲವು ಮಂದಿ ಕಾಂಗ್ರೆಸ್ ಮುಖಂಡರಿಗೆ ಮನವಿ ಮಾಡಿ ರಾಹುಲ್ ಅವರನ್ನು ಭೇಟಿ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News