×
Ad

ಅಪ್ರಾಪ್ತರ ಮೇಲೆ ಅತ್ಯಾಚಾರ ನಡೆದರೆ ಅದು ಅತ್ಯಾಚಾರ, ಆದರೆ ವಿವಾಹಿತ ಮಹಿಳೆಯ ಮೇಲಾದರೆ…

Update: 2019-06-09 20:43 IST

ಹೊಸದಿಲ್ಲಿ, ಜೂ.9: ಅಪ್ರಾಪ್ತೆಯ ಮೇಲಿನ ಅತ್ಯಾಚಾರ ನಡೆದರೆ ಅದನ್ನು ಅತ್ಯಾಚಾರ ಎನ್ನಬಹುದು ಆದರೆ ವಿವಾಹಿತ ಮಹಿಳೆಯ ಮೇಲೆ ನಡೆಯುವುದು ಅತ್ಯಾಚಾರವಲ್ಲ ಎಂಬರ್ಥದ ಹೇಳಿಕೆ ನೀಡುವ ಮೂಲಕ ಉತ್ತರ ಪ್ರದೇಶ ಸಚಿವ ಉಪೇಂದ್ರ ತಿವಾರಿ ವಿವಾದ ಸೃಷ್ಟಿಸಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡಿದ ಅವರು, “ಅಪ್ರಾಪ್ತರ ಮೇಲೆ ಅತ್ಯಾಚಾರ ನಡೆದರೆ ಅದನ್ನು ನಾವು ಅತ್ಯಾಚಾರ ಎಂದು ಪರಿಗಣಿಸಬಹುದು. ಆದರೆ 30-35 ವರ್ಷದ ಮಹಿಳೆಯ ಅತ್ಯಾಚಾರ ಎಂಬ ಘಟನೆ ನಡೆದರೆ ಅದು ಬೇರೆಯದೇ ವಿಚಾರವಾಗಿರುತ್ತದೆ. ಪರಸ್ಪರ ಸಂಬಂಧ ಹೊಂದಿದ್ದು, ಕೆಲ ವರ್ಷಗಳ ನಂತರ ಅವರು ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸುತ್ತಾರೆ. ಆಗ ಅಪ್ರಾಪ್ತರ ಮೇಲಿನ ಅತ್ಯಾಚಾರಕ್ಕಿಂತ ಇದು ಬೇರೆಯದೇ ಆಗಿರುತ್ತದೆ” ಎಂದರು.

ಸಚಿವರ ಈ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News